ಆಟವಾಡುತ್ತಿದ್ದಾಗ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದ ಮಗು.

Promotion

ಮೈಸೂರು,ಸೆಪ್ಟಂಬರ್,22,2021(www.justkannada.in): ಆಟವಾಡುತ್ತಿದ್ದಾಗ ಮಗು ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಅಸ್ವಸ್ಥವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕ್ಷೇತ್ರಯ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುಂಜನ್ (2) ಅಸ್ವಸ್ಥಗೊಂಡ ಮಗು. ಉದ್ಯಮಿ ಸುಜಾರಾಮ್  ಎಂಬುವವರ ಮಗು ಗುಂಜನ್ ಆಟವಾಡುತ್ತಿದ್ದಾಗ ಆಯತಪ್ಪಿ ಸಂಪ್ ಗೆ  ಬಿದ್ದಿದೆ. ಈ ಮಧ್ಯೆ ಮಗು ಕಾಣದಿದ್ದಾಗ  ತಾಯಿ ಹುಡುಕಾಡಿದ್ದು, ಬಳಿಕ ಸಂಪ್ ನೋಡಿದಾಗ ಮಗ ಸಂಪ್ ಬಿದ್ದಿರುವುದನ್ನು ಕಂಡು ಕೂಗಿಕೊಂಡಿದ್ದಾರೆ.

ಈ ವೇಳೆ ಅಲ್ಲಿಗೆ ಬಂದ ಕುಟುಂಬಸ್ಥರು ನೆರೆಹೊರೆಯವರು ಮಗುವನ್ನು ಹೊರಕ್ಕೆ ತೆಗೆದಿದ್ದಾರೆ.  ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ  ಮಗವನ್ನ ಕರೆದೊಯ್ಯಲಾಗಿದೆ.

Key words:  child -fell –  water sump –playing-mysore