ಸಿನಿಮೀಯ ಸ್ಟೈಲ್ ನಲ್ಲಿ ದರೋಡೆ ಮಾಡಲು ಬಂದು ಸಿಕ್ಕಿಬಿದ್ದ ಖದೀಮರು…

Promotion

ಚಿಕ್ಕಮಗಳೂರು,ಫೆಬ್ರವರಿ,27,2021(www.justkannada.in):  ಮಹಿಳೆಯನ್ನ ಕಟ್ಟಿಹಾಕಿ ದರೋಡೆಗೆ ಯತ್ನಿಸಿದ್ದ ಇಬ್ಬರು ದರೋಡೆಕೋರರು ಸಿನಿಮಾ ಸ್ಟೈಲ್ ನಲ್ಲಿ  ಜನರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.jk

ಚಿಕ್ಕಮಗಳೂರಿನ ಎಐಟಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ದರೋಡೆಗೆ ಯತ್ನಿಸಿದ ಆರೋಪಿಗಳಾದ ಮೋಹನ್ ಮತ್ತು ಸಚಿನ್ ನನ್ನ ಜನರೇ ಕಲ್ಲಿನಿಂದ ಹೊಡೆದು ಹಿಡಿದಿದ್ದಾರೆ.  ಆರೋಪಿಗಳಿಬ್ಬರು  ಮಹಿಳೆ ಇದ್ದ ಮನೆಗೆ ನುಗ್ಗಿ, ಸುಲಿಗೆ ಯತ್ನಿಸಿ, ಪರಾರಿಯಾಗಲು ಯತ್ನಿಸಿದ್ದರು.

ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದಿದ್ದ  ಇಬ್ಬರು ಮನೆಯಲ್ಲಿದ್ದ ಮಹಿಳೆಯನ್ನು ಕಟ್ಟಿಹಾಕಿ, ಒಡವೆ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಚಂದ್ರೇಗೌಡ ಅವರ ಪುತ್ರಿ ಮನೆಗೆ ಬಂದು ಬಾಗಿಲು ಬೆಲ್ ಮಾಡಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದಿದ್ದಾಗ, ಕಿಟಕಿಯ ಮೂಲಕ ಒಳಗೆ ನೋಡಿದ್ದಾರೆ.

ಮನೆಯ ಒಳಗಡೆ ದುಷ್ಕರ್ಮಿಗಳು ಮನೆಯವರನ್ನು ಕಟ್ಟಿಹಾಕಿದ್ದನ್ನು ಗಮನಿಸಿದ ಅವರು, ಹೊರಗೆ ಬಂದು ಸಹಾಯಕ್ಕಾಗಿ ಕೋರಿಕೊಂಡಿದ್ದಾರೆ. ಈ ವೇಳೆ  ಮನೆಯಿಂದ ಹೊರ ಬಂದು ಓಡಲು ಯತ್ನಿಸಿದ ದರೋಡೆಕೊರರನ್ನ ಅಲ್ಲಿನ ಸ್ಥಳೀಯರ ಅಟ್ಟಾಡಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Key words: chikkamagalore- Trapped – robbery-arrest