ಹೈವೇ ಕಾಮಗಾರಿ ನಿಲ್ಲಿಸುವಂತೆ ಪಟ್ಟು: ಸಂಸದೆ ಸುಮಲತಾ ಅಂಬರೀಶ್ ಗೆ ಗ್ರಾಮಸ್ಥರಿಂದ ಮುತ್ತಿಗೆ, ತರಾಟೆ..

politics-sugar-factory-privatization-mysore-mp-sumalatha-ambarish
Promotion

ಮಂಡ್ಯ,ಅಕ್ಟೋಬರ್,18,2022(www.justkannada.in): ಹೈವೇ ಕಾಮಗಾರಿಯಿಂದ ನೂರಾರು ಎಕರೆ ಜಮೀನು ಹಾಳಾಗಿದೆ. ಹೀಗಾಗಿ ಹೈವೇ ಕಾಮಗಾರಿ ನಿಲ್ಲಿಸುವಂತೆ ಚಿಕ್ಕಮಂಡ್ಯ ಗ್ರಾಮಸ್ಥರು ಪಟ್ಟು  ಹಿಡಿದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ.

ಮಂಡ್ಯನಗರದ ಚಿಕ್ಕಮಂಡ್ಯ ನಗರ ಗ್ರಾಮಸ್ಥರು ಹೈವೇ ಕಾಮಗಾರಿ ವಿಚಾರಕ್ಕೆ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಹೈವೇ ಕಾಮಗಾರಿಯಿಂದ ನೂರಾರು ಎಕರೆ ಜಮೀನು ಹಾಳಾಗಿದೆ. ಸ್ಥಳ ಪರಿಶೀಲಿಸದೆ ನೀವೆಲ್ಲಿಗೆ ಹೋಗುತ್ತಿದ್ದೀರಿ..? ಎಂದು ತರಾಟೆ ತೆಗೆದುಕೊಂಡರು.politics-sugar-factory-privatization-mysore-mp-sumalatha-ambarish

ಅಲ್ಲದೆ ತಕ್ಷಣವೇ ಹೈವೇ ಕಾಮಗಾರಿ ನಿಲ್ಲಿಸಿ. ಕೆರೆಕೋಡಿ ರಕ್ಷಿಸಿ ನಮ್ಮನ್ನು ಬದುಕಲು ಬಿಡಿ ಎಂದು ಪಟ್ಟುಹಿಡಿದರು. ಜೊತೆಗೆ  ಸ್ಥಳದಲ್ಲಿದ್ದ ಅಧಿಕಾರಿಗಳಿಗೂ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡರು.

Key words: chikka mandya-MP -Sumalatha Ambarish –villagers-class