75 ಅರಣ್ಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ:  ಇಂದು ಸಿಎಂರಿಂದ ಪ್ರಶಸ್ತಿ ಪ್ರದಾನ…

Promotion

ಬೆಂಗಳೂರು, ನವೆಂಬರ್,23,2020(www.justkannada.in): ದಕ್ಷ, ಸೇವಾ ಬದ್ಧತೆ, ಅರಣ್ಯ, ವನ್ಯಜೀವಿ ಸಂರಕ್ಷಣೆ ಮಹತ್ತರ ಸೇವೆಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡುವ ಮುಖ್ಯಮಂತ್ರಿ ಪದಕಕ್ಕೆ 75 ಮಂದಿಯನ್ನ ಆಯ್ಕೆ ಮಾಡಲಾಗಿದ್ದು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.kannada-journalist-media-fourth-estate-under-loss

ಕಳೆದ ಮೂರು ವರ್ಷಗಳಿಂದ ಅರಣ್ಯ ಸಿಬ್ಬಂದಿಗಳಿಗೆ  ಪ್ರಶಸ್ತಿ ಘೋಷಣೆ ಆಗಿದ್ರೂ ಮುಖ್ಯಮಂತ್ರಿ ಪದಕ ಇನ್ನು ಸಿಕ್ಕಿರಲಿಲ್ಲ. ಪ್ರಶಸ್ತಿ ಪಟ್ಟಿ ಪ್ರಕಟವಾಗಿ ಮೂರು ವರ್ಷಗಳೆ ಕಳೆದಿದ್ದರೂ ಪ್ರಶಸ್ತಿ ಪ್ರಧಾನ ಮಾತ್ರ ಆಗಿರಲಿಲ್ಲ. ಪ್ರಶಸ್ತಿ ಪ್ರದಾನಕ್ಕೆ ಇಂದು ಕಾಲ ಕೂಡಿ ಬಂದಿದ್ದು ಇಂದು ವಿಧಾನ ಸೌಧದಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ ಸಾಧನೆ ಮಾಡಿದ 75 ಅರಣ್ಯ ಸಿಬ್ಬಂದಿಗಳಿಗೆ  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.chief-minister-medal-75-forest-officer-award-present-cm-today

ಇನ್ನು ಮೈಸೂರು ವೃತ್ತದ 6 ಮಂದಿ ಅರಣ್ಯ ಸಿಬ್ಬಂದಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಪ್ರತಿ ವರ್ಷ 25 ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು 2017, 2018 ಹಾಗೂ 2019ರ ಮೂರು ವರ್ಷದಲ್ಲಿ  75 ಅಧಿಕಾರಿ ಸಿಬ್ಬಂದಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಪ್ರಶಸ್ತಿ ಪ್ರದಾನ ಮಾಡಲಾಗಿರಲಿಲ್ಲ.

English summary….

Chief Minister’s medal for 75 forest staff
Bengaluru, Nov. 23,2020 (www.justkannada.in): Chief Minister B.S. Yedyurappa will give away the Chief Minister’s medals to 75 forest staff, recognising their efficiency, honesty in service and contribution towards forest and wildlife conservation.chief-minister-medal-75-forest-officer-award-present-cm-today
Though the list of awardees was prepared three years ago, awards were not given from the last three years for various reasons. Medals will be distributed at a programme scheduled to be held at Vidhana Soudha today.
Keywords: CM medal – forest staff-

Key words: Chief Minister medal -75 forest officer-  Award- present- CM -today.