ಮೈಸೂರು ಡಿಸಿ ರೋಹಿಣಿ ಸಿಂಧೂರಿ ನೇಮಕ ವಿಚಾರ: ಇಂದು ಮಹತ್ವದ ತೀರ್ಪು ಸಾಧ್ಯತೆ…

ಮೈಸೂರು,ನವೆಂಬರ್,23,2020(www.justkannada.in): ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ನಿರ್ಗಮಿತ ಡಿಸಿ ಬಿ. ಶರತ್ ಅವರು ಸಲ್ಲಿಸಿದ್ದ ಅರ್ಜಿ ಕುರಿತು ಇಂದು ಮಹತ್ವದ ತೀರ್ಪು ಹೊರಬೀಳಲಿದೆ.kannada-journalist-media-fourth-estate-under-loss

ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕವಾದ ಒಂದು ತಿಂಗಳೊಳಗೆ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿ ನಿರ್ಗಮಿತ ಡಿಸಿ ಬಿ.ಶರತ್ ಅವರು ಸಿಎಟಿ ಮೊರೆ ಹೋಗಿದ್ದಾರೆ.  ಕಳೆದ ಒಂದು ತಿಂಗಳಿಂದ ಅರ್ಜಿ ವಿಚಾರಣೆ ಸಿಎಟಿ ಅಂಗಳದಲ್ಲಿದ್ದು, ಈ ಅರ್ಜಿ ವಿಚಾರಣೆಯನ್ನ ಸಿಎಟಿ ಈಗಾಗಲೇ ಐದು ಬಾರಿ ಮುಂದೂಡಿಕೆ ಮಾಡಿದೆ, ಇಂದು ಮತ್ತೆ ಅರ್ಜಿ ವಿಚಾರಣೆಗೆ ಬರಲಿದೆ.mysore-dc-rohini-sindhuri-appointment-issue-today-significant-verdict

ಹೀಗಾಗಿ ಇಂದು ಅರ್ಜಿ ವಿಚಾರಣೆ ನಡೆಸಲಿರುವ ಸಿಎಟಿ ಮಹತ್ವದ ತೀರ್ಪು ನೀಡುವ ಸಾಧ್ಯತೆ ಇದ್ದು, ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರೇ ಮುಂದುವರೆಯುತ್ತಾರೆಯೇ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

Key words: Mysore- DC- Rohini Sindhuri- Appointment –issue-Today – significant verdict.