ಸಚಿವ ಬಿ.ಸಿ ಪಾಟೀಲ್ ಗೆ ನೀಡಿದ್ದ ಖಾತೆ ಬದಲಾವಣೆ: ಅರಣ್ಯ ಬದಲು ಕೃಷಿಖಾತೆ ನೀಡಿದ ಸಿಎಂ ಬಿಎಸ್ ವೈ….

Promotion

ಬೆಂಗಳೂರು,ಫೆ,11,2020(www.justkannada.in):   ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿ ನೂತನ 10 ಸಚಿವರಿಗೆ ಖಾತೆಗಳನ್ನ ಹಂಚಿಕೆ ಮಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಇದೀಗ  ಸಚಿವ ಬಿ.ಸಿ ಪಾಟೀಲ್ ಗೆ ನೀಡಿದ್ದ ಖಾತೆಯನ್ನ ಬದಲಾವಣೆ ಮಾಡಿದ್ದಾರೆ.

 ಖಾತೆ ಹಂಚಿಕೆ ವೇಳೆ ಸಚಿವ ಬಿ.ಸಿ.ಪಾಟೀಲ್ ಗೆ ಅರಣ್ಯ ಇಲಾಖೆ ಖಾತೆ ನೀಡಲಾಗಿತ್ತು. ಆದರೆ ಅರಣ್ಯ ಖಾತೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ  ಸಚಿವ ಬಿ.ಸಿ.ಪಾಟೀಲ್  ಗೆ ಅರಣ್ಯ ಖಾತೆ ಬದಲಾವಣೆ ಮಾಡಲಾಗಿದ್ದು, ಕೃಷಿ ಖಾತೆ ನೀಡಲಾಗಿದೆ ಖಾತೆ ಬದಲಾಯಿಸಿ  ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ.

ಜತೆಗೆ ಮೂರರಿಂದ ನಾಲ್ವರು ಸಚಿವರ ಖಾತೆ ಬದಲಾವಣೆಗೂ ಸಿಎಂ ಬಿಎಸ್ ವೈ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ಶಿಕ್ಷಣ  ಸಚಿವ ಡಾ.ಸುಧಾಕರ್ ಕೂಡ ನಿನ್ನೆ ಮಾಧ್ಯಮಗಳ ಜತೆ ಮಾತನಾಡುವ ವೇಳೆ ನಾನು ಸಿಎಂ ಬಿಎಸ್ ವೈ ಜತೆ ಮಾತನಾಡಿದ್ದೆ ಬೇರೆ ಆದರೆ ನೀಡಿರುವುದೇ ಬೇರೆ ಎಂದಿದ್ದರು.

Key words: Changes – Minister-BC Patil-forest department- Department of Agriculture- CM BS Yeddyurappa