ರಾಜ್ಯಾಧ್ಯಕ್ಷರ ಬದಲಾವಣೆ ಹೈ ಕಮಾಂಡ್ ಗೆ ಬಿಟ್ಟದ್ದು: ಅಬಕಾರಿ ಸಚಿವ ಕೆ.ಗೋಪಾಲಯ್ಯ.

Promotion

ತುಮಕೂರು,ಆಗಸ್ಟ್.24,2022(www.justkannada.in) ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಬದಲಾವಣೆ ಪಕ್ಷದ ಹೈ ಕಮಾಂಡಿಗೆ ಬಿಟ್ಟ ವಿಚಾರ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು‌.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೈ ಬಿಡಬೇಕೆಂಬ  ಸಾಮಾಜಿಕ ಜಾಲತಾಣದಲ್ಲಿ ಹೋರಾಟ ವಿಚಾರದ ಬಗ್ಗೆ  ಹೈ‌ಕಮಾಂಡ್ ಅಂತಿಮ ತೀರ್ಮಾನ  ಕೈಗೊಳ್ಳಲಿದೆ ಎಂದರು.

ಅದು ಪಕ್ಷದ ಆಂತರಿಕ ವಿಚಾರ, ಮೂರು ವರ್ಷ ಆದ ಮೇಲೆ ಬೇರೆಯವರಿಗೆ ಅವಕಾಶ ಕೊಡುವುದು ಪಕ್ಷದ ನಿಯಮ. ಇದರ ಬಗ್ಗೆ ತೀರ್ಮಾನ ಕೈ ಗೊಳ್ಳಲು ಕೇಂದ್ರದ ವರಿಷ್ಠರು ಇದ್ದಾರೆ. ನಾವು ಜಿಲ್ಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೇಂದ್ರದಿಂದ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾವೆಲ್ಲರೂ ಬದ್ದರಾಗಿರುವುದಾಗಿ ತಿಳಿಸಿದರು.

Key words:  change – state president – high command-Minister- K. Gopalaiah