ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಪೊಲೀಸರ ಕೆಲಸಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಶ್ಲಾಘನೆ…

Promotion

ಬೆಂಗಳೂರು,ಜುಲೈ,6,2022(www.justkannada.in):  ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಚಂದ್ರಶೇಖರ್ ಗುರೂಜಿ ಅವರನ್ನ ಹತ್ಯೆ ಮಾಡಿದ ಹಂತಕರನ್ನ ನಾಲ್ಕೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರ ಕಾರ್ಯಕ್ಕೆ  ಗೃಹ ಸಚಿವ ಅರಗ ಜ್ಞಾನೇಂದ್ರ ಶ್ಲಾಘಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ. ಜೆಸಿಬಿ ಬಳಸಿ ಆರೋಪಿಗಳ ಕಾರು ತಡೆದಿದ್ದಾರೆ.  ಪೊಲೀಸರ ಕಾರ್ಯ ವೈಖರಿ ಹೃದಯ ತುಂಬಿದೆ.  ಹಂತಕರನ್ನ ಬಂಧಿಸಿದ ಪೊಲೀಸರನ್ನ ಭೇಟಿಯಾಗುವೆ. ಪೊಲೀಸರಿಗೆ ಬಹುಮಾನ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.

ನಿನ್ನೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಭಕ್ತರ ಸೋಗಿನಲ್ಲಿ ಬಂದ ಆರೋಪಿಗಳು ಚಂದ್ರಶೇಖರ್ ಗುರೂಜಿ ಅವರನ್ನ ಹತ್ಯೆಗೈದು ಪರಾರಿಯಾಗುತ್ತಿದ್ದರು. ಈ ಮಧ್ಯೆ ಇಬ್ಬರು ಆರೋಪಿಗಳನ್ನ ಬೆಳಗಾವಿಯ ರಾಮದುರ್ಗದ ಬಳಿ ತಡೆದು ಪೊಲೀಸರು ಬಂಧಿಸಿದ್ದರು.

Key words: chandrashekar guruji-murder case-police-home minister-araga jnanendra.