ಕಲಾವಿದ ಚಂದ್ರನಾಥ್ ಕುಂಚದಿಂದ ಕ್ಯಾನ್ವಸ್ ಮೇಲೆ ಜೀವತಳೆದ ‘ ಪೌರಾಣಿಕ’ ಚಿತ್ರಕಲೆ.

 

ಬೆಂಗಳೂರು, ಜೂನ್ ೧೭, ೨೦೨೨ (www.justkannada.in): ಕಾಲ ಕಳೆದಂತೆ ಜನರ ಅಭಿರುಚಿಯೂ ಬದಲಾಗುತ್ತಿರುತ್ತದೆ, ಇದು ಸ್ವಾಭಾವಿಕವೂ ಹೌದು. ಆದರೆ ಕೆಲವು ವಿಷಯಗಳು ಮಾತ್ರ ಅವುಗಳ ಮೌಲ್ಯವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಮಹಾಭಾರತ ಹಾಗೂ ರಾಮಾಯಣದ ಕತೆಗಳನ್ನು ಬಿಂಬಿಸುವ ಭಾರತದ ಕಲಾತ್ಮಕ ಚಿತ್ರಕಲೆ ಇದರ ಒಂದು ಉದಾಹರಣೆ.

ಜನಪ್ರಿಯ ಕಲಾವಿದ ಚಂದ್ರನಾಥ್ ಆಚಾರ್ಯ ಅವರ ವಾಟರ್‌ಕಲರ್ ಚಿತ್ರಕಲಾ ಸರಣಿಯನ್ನು ಒಮ್ಮೆ ನೋಡಿದರೆ ಮೇಲಿನ ಎರಡೂ ಪೌರಾಣಿಕ ಕತೆಗಳಲ್ಲಿರುವ ಪಾತ್ರಗಳು ನಿಮ್ಮ ಕಣ್ಣ ಮುಂದೆ ಸುಳಿಯುವುದು ನಿಶ್ಚಿತ. ಚಂದ್ರನಾತ್ ಅವರ ವರ್ಣಚಿತ್ರಗಳು, ಅದರ ಸೌಂದರ್ಯ, ರಚನೆ, ಆವಿಷ್ಕರಣೀಯತೆ, ವಿವರತೆ ಹಾಗೂ ಅತ್ಯದ್ಭುತ ಮತ್ತು ಸೂಕ್ಷ್ಮವಾದ ಬಣ್ಣಗಳ ಬಳಕೆಯಿಂದಾಗಿ ಸದಾ ನೆನಪಿನಲ್ಲಿ ಉಳಿಯುತ್ತದೆ. ತಮ್ಮ ಬೃಹತ್ ಕೊಡುಗೆಯೊಂದಿಗೆ ಚಂದ್ರನಾಥ್ ಅವರು ಚಿತ್ರಕಲೆಯ ತೀರ್ಪಿಗೇ ಒಂದು ಗುಣಮಟ್ಟವನ್ನು ಸ್ಥಾಪಿಸಿದ್ದಾರೆ ಎಂದು ಅನಿಸದೇ ಇರದು.

ಬೆಂಗಳೂರಿಗರಿಗೆ ಪುರಾಣಗಳ ಪ್ರಪಂಚದಲ್ಲಿ ಒಮ್ಮೆ ಇಣುಕಲು ಚಂದ್ರನಾಥ್ ಅವರು ಒಂದು ಅದ್ಭುತವಾದ ಅವಕಾಶವನ್ನು ಸೃಷ್ಟಿಸಿಕೊಟ್ಟಿದ್ದಾರೆ. ಮಹಾಭಾರತದ ಪಾತ್ರಗಳು ಇವರ ಚಿತ್ರಕಲಾ ಪ್ರದರ್ಶನದಲ್ಲಿ ಜೀವಂತಗೊಂಡಿದೆ. ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ((IIWC) ನಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನಕ್ಕೆ ‘ಒಡಿಸ್ಸಿ ಟು ಎ ಗ್ರೇಟ್ ಎಪಿಕ್’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಪ್ರದರ್ಶನ ಜೂನ್ ೨೩ರಂದು ಕೊನೆಗೊಳ್ಳಲಿದೆ.

IIWC ನೂತನ ಕಲಾ ಗ್ಯಾಲರಿಯಲ್ಲಿ ಪ್ರದರ್ಶಿತಗೊಂಡಿರುವ ಚಂದ್ರನಾಥ್ ಅವರ ಚಿತ್ರ ಕಲಾಕೃತಿಗಳನ್ನು ಒಮ್ಮೆ ನೋಡಿದರೆ, ಅವರು ಎಂತಹ ಅದ್ವಿತೀಯ ಕಲಾವಿದ ಎನ್ನುವುದು ಅರಿವಾಗುತ್ತದೆ. ಅಸಂಬದ್ಧ ಕಲೆ ಅಲಿಖಿತ ನಿಯಮವಾಗುತ್ತಿರುವ ಇಂದಿನ ದಿನಗಳಲ್ಲಿ ಶಾಸ್ತ್ರೀಯ ಚಿತ್ರಕಲೆ ಒಂದು ಸ್ವಾಗತಾರ್ಹ ಕಲಾ ರೂಪಕವಾಗಿ ಮೂಡಿದೆ. ಜೊತೆಗೆ ಕಲಾವಿದ ಚಂದ್ರನಾಥ್ ಆಚಾರ್ಯ ಅವರು ತಮ್ಮ ಸಮಕಾಲೀನ ಬೆಳವಣಿಗೆಗಳು ಹಾಗೂ ಪ್ರವೃತ್ತಿಗಳನ್ನು ಸೆರೆ ಹಿಡಿದಿರುವ ಅವಾಸ್ತವಿಕವಾದ ಚಿತ್ರಕಲೆಗಳಿಗೂ ಪ್ರಸಿದ್ಧರಾಗಿದ್ದಾರೆ.

ಇವರ ಚಿತ್ರಕಲಾಕೃತಿಗಳು ನಮಗೆ ಚಂದಮಾಮದಲ್ಲಿ ಮೂಡಿಬರುತ್ತಿದ್ದಂತಹ ಚಿತ್ರಗಳು ಹಾಗೂ ರಾಜಾ ರವಿ ವರ್ಮಾ ಅವರ ಅತ್ಯಮೂಲ್ಯ ಚಿತ್ರಕಲೆಗಳನ್ನು ನೆನಪಾಗಿಸುತ್ತದೆ. ಚಂದ್ರನಾಥ್ ಅವರು ತಮ್ಮ ನೂರಾರು ಚಿತ್ರಕಲೆಗಳ ಮೂಲಕ ಚಿತ್ರಕಲಾ ಪ್ರಿಯರಲ್ಲಿ ಅತ್ಯಂತ ಜನಪ್ರಿಯರಾಗಿದ್ದು ಅಂತಹವರಿಗೆ ಇವರ ಪರಿಚಯದ ಅಗತ್ಯವೇ ಇಲ್ಲ. ಈ ಹಿಂದೆ ಇವರು ಪ್ರೊ. ಅ.ರಾ. ಮಿತ್ರ ಅವರ ‘ಕುಮಾರವ್ಯಾಸ ಭಾರತ’ ಸರಣಿಯ ಚಿತ್ರಕಲಾ ಸರಣಿಯನ್ನು ರಚಿಸಿದ್ದರು. ಅದು ೧೯೮೦ರ ದಶಕದಲ್ಲಿ ಕನ್ನಡದ ಜನಪ್ರಿಯ ಸಾಪ್ತಾಹಿಕ ವಾರಪತ್ರಿಕೆ ಸುಧಾದಲ್ಲಿ ಪ್ರಕಟಗೊಂಡಿತ್ತು. ಅದಲ್ಲದೆ ಶ್ರೀಯುತರು ಅದೇ ವಾರಪತ್ರಿಕೆಗೆ ‘ವಚನ ಭಾರತ’ ಅತ್ಯಾಕರ್ಷಕ ಸರಣಿಯನ್ನೂ ರಚಿಸಿದ್ದರು.

ಅವರ ಚಿತ್ರಗಳಿಂದಾಗಿಯೆ ವಾರಪತ್ರಿಕೆಯ ಮಾರಾಟ ಮಹತ್ತರವಾದ ಮಟ್ಟಿಗೆ ಹೆಚ್ಚಾಯಿತು ಎನ್ನುವುದು ವಾಸ್ತವ. ಸುಧಾ ವಾರಪತ್ರಿಕೆಯೊಂದಿಗಿನ ಅವರ ಸುಮಾರು ಎರಡು ದಶಕಗಳ ಸಹಯೋಗ ಅವರಿಗೆ ಒಂದು ಕಲಿಕೆಯೂ ಆಗಿತ್ತು ಎಂದು ವಿನಮ್ರತೆಯಿಂದ ನೆನಪು ಮಾಡಿಕೊಳ್ಳುತ್ತಾರೆ ಚಂದ್ರನಾಥ್ . ಜೊತೆಗೆ ಎಸ್. ರಮೇಶ್, ಜಿ.ಕೆ. ಸತ್ಯ ಹಾಗೂ ಸಿಂಹ ಒಳಗೊಂಡಂತೆ ಇನ್ನಿತರೆ ಕಲಾವಿದರೊಂದಿಗಿನ ಅವರ ಸಂಬಂಧವನ್ನೂ ಸ್ಮರಿಸಿಕೊಂಡರು. ಪುರಾಣಗಳ ಕುರಿತು ಮುಕ್ತ ಮನಸ್ಸು ಹಾಗೂ ಪ್ರೀತಿ ಇರುವವರಿಗೆ ಮಾತ್ರ, ಪ್ರಸ್ತುತ ಹಾಗೂ ಭವಿಷ್ಯದಲ್ಲಿಯೂ ಸಂಗ್ರಹಯೋಗ್ಯವಾದ ಇಂತಹ ಮಾಸ್ಟರ್‌ಪೀಸ್ ಕಲಾಕೃತಿಗಳನ್ನು ಸೃಷ್ಟಿಸುವುದು ಸಾಧ್ಯ ಎನ್ನುತ್ತಾರೆ.

ಚಂದ್ರನಾಥ್ ಅವರಿಗೆ ಚಿತ್ರಕಲಾ ಪ್ರದರ್ಶನ ಆಯೋಜಿಸಲು ಏನು ಪ್ರೇರಣೆಯಾಯಿತು? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಐಐಡಬ್ಲೂಸಿ’ ಗಲ್ಲದೆ ಇದ್ದರೆ ನಾನು ಈ ಪ್ರದರ್ಶನವನ್ನು ಆಯೋಜಿಸುತ್ತಿರಲಿಲ್ಲ. ಆಯೋಜಕರಿಗೆ ಪ್ರಾಯೋಜಕರ ಏರ್ಪಾಡು ಮಾಡುವುದು ಸಾಧ್ಯವಾಯಿತು, ಆದ್ದರಿಂದಲೇ ಇಂದು ನಾನು ಇಲ್ಲಿದ್ದೇನೆ ಎಂದರು. ನೀವು ಅವರನ್ನು ಆಧುನಿಕ ಕಲೆ ಅಥವಾ ಅಸಂಗತ ಕಲೆಯ ಕುರಿತು ಅಭಿಪ್ರಾಯವನ್ನು ಕೇಳಿದರೆ ಅವರು ಕಿರುನಗೆಯೊಂದಿಗೆ, “ಕಲೆಗಳಲ್ಲಿ ವಿವಿಧ ಬಗೆಗಳಿವೆ. ನಾನೂ ಸಹ ಅನೇಕ ಕಲೆಗಳನ್ನು ಪ್ರಯೋಗಿಸಿದ್ದೇನೆ. ಆದರೆ ಯಾವುದೇ ಕಲೆ ಆದರೂ ಸಹ ಸಾಮಾನ್ಯ ಜನರಿಗೆ ಮೆಚ್ಚುಗೆ ಆಗುವಂತಿರುವುದು ಮುಖ್ಯ,” ಎಂದರು.

ಬಾಣಗಳ ಹಾಸಿಗೆಯ ಮೇಲೆ ಮಲಗಿರುವ ಭೀಷ್ಮನ ಚಿತ್ರ ಕಲಾಕೃತಿ ಅಥವಾ ತನ್ನ ಕಾಲ ಹೆಬ್ಬೆರಳಿಗೆ ಬಾಣವೊಂದು ತಾಕಿದ ನಂತರ ನೆಲದ ಮೇಲೆ ಮಲಗಿರುವ ಭಗವಾನ್ ಕೃಷ್ಣನ ಕಲಾಕೃತಿಯನ್ನು ಸೃಷ್ಟಿಸಲು ತಮಗೆ ಎಷ್ಟು ಸಮಯ ಬೇಕಾಗುತ್ತದೆ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂದ್ರನಾಥ್ ಅವರು, “ಸರಾಸರಿ ನಾನು ಪ್ರತಿ ಚಿತ್ರಕ್ಕೆ ಅಂದಾಜು ೬ ರಿಂದ ೮ ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಆಗ ಪೌರಾಣಿಕ ಪಾತ್ರಗಳ ಕುರಿತಾದ ನನ್ನ ಕಲ್ಪನೆ ಕ್ಯಾನ್ವಸ್ ಮೇಲೆ ಪ್ರತಿಬಿಂಬಿತಗೊಳ್ಳುತ್ತದೆ,” ಎಂದರು.

ಇವರ ಕಲಾಕೃತಿಗಳಲ್ಲಿ ಕೆಂಪು ಅಥವಾ ನೀಲಿಯಂತ ಬಹಳ ಉಜ್ವಲವಾದಂತಹ ಬಣ್ಣಗಳನ್ನು ಬಳಸುವುದಿಲ್ಲ. ಚಂದಮಾಮ ಹಾಗೂ ಇವರ ಕಲಾಕೃತಿಗಳಲ್ಲಿ ಸ್ಪಷ್ಟವಾದ ವ್ಯತ್ಯಾಸಗಳು ಗೋಚರಿಸುತ್ತವೆ. “ನಾನು ಉದ್ದೇಶಪೂರ್ವಕವಾಗಿಯೇ ಕಣ್ಣಿಗೆ ಆಹ್ಲಾದಕರವಾಗಿರುವಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಚಿತ್ರಕಲಾಕೃತಿಗಳು ದೈನಂದಿನ ಬದುಕನ್ನು ಪ್ರತಿಬಿಂಬಸುವಂತಿರಬೇಕು ಎನ್ನುವುದು ನನ್ನ ಅನಿಸಿಕೆ.

ನಡವಳಿಕೆಗಳನ್ನು ತೋರಿಸುವಾಗ ಅವಾಸ್ತವಿಕ ದೃಷ್ಟಿಕೋನಗಳಿರಬಾರದು. ನಾನು ಆಯ್ಕೆ ಮಾಡಿಕೊಳ್ಳುವ ಯಾವುದೇ ವಿಷಯವನ್ನಾದರೂ ನಾನು ಅತಿಯಾಗಿ ವೈಭವೀಕರಿಸುವುದಿಲ್ಲ,” ಎಂದರು.

ಅತಿಯಾದ ವಾಹನದಟ್ಟಣೆ ಇರುವ ಕಾರಣದಿಂದಾಗಿ ಮನೆಗಳಿಂದ ಜನರು ಹೊರಗೆ ಬರಲೂ ಸಹ ಹಿಂಜರಿಯುವ ಬೆಂಗಳೂರಿನಂತ ನಗರದಲ್ಲಿ ಇವರ ಚಿತ್ರಕಲಾ ಪ್ರದರ್ಶನಕ್ಕೆ ಯಾವ ರೀತಿ ಪ್ರತಿಕ್ರಿಯೆ ಲಭಿಸಿದೆ ಎಂಬ ಪ್ರಶ್ನೆಗೆ? “ಓ! ಪ್ರದರ್ಶನಕ್ಕೆ ಲಭಿಸುತ್ತಿರುವ ಪ್ರತಿಕ್ರಿಯೆಯಿಂದ ನನಗೆ ಅತ್ಯಾಶ್ಚರ್ಯವಾಗಿದೆ! ಉಡುಪಿಯಂತಹ ಒಂದ ಚಿಕ್ಕ ಪಟ್ಟಣದಿಂದ ಬಂದಿರುವ ನನ್ನಂತಹ ವ್ಯಕ್ತಿಗೆ ಇಂತಹ ಅದ್ಭುತ ಪ್ರತಿಕ್ರಿಯೆ ಲಭಿಸುತ್ತದೆ ಎಂದು ನಾನು ಎಂದಿಗೂ ಎಣಿಸಿರಲಿಲ್ಲ. ಪ್ರದರ್ಶನಕ್ಕೆ ಅದ್ವಿತೀಯ ಪ್ರಶಂಸೆ ಹಾಗೂ ಪ್ರತಿಕ್ರಿಯೆ ದೊರೆಯುತ್ತಿದೆ. ಜೂನ್ ೧೬ರಂದು ಅಂತ್ಯಗೊಳ್ಳಬೇಕಾಗಿದ್ದ ಈ ಪ್ರದರ್ಶನವನ್ನು ಜನರ ಒತ್ತಾಯದಿಂದಾಗಿ ಜೂನ್ ೨೩ರವರೆಗೆ ವಿಸ್ತರಿಸಲಾಗಿದೆ. ಇಲ್ಲಿ ಒಟ್ಟು ೫೩ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಈ ಪೈಕಿ ಯಾವುದೇ ಕಲಾಕೃತಿಯನ್ನೂ ಸಹ ನಾನು ಮಾರಾಟ ಮಾಡಲು ಬಯಸುವುದಿಲ್ಲ. ಏಕೆಂದರೆ ವಿಷಯವಸ್ತು ಇಲ್ಲಿಗೇ ಸ್ಥಗಿತಗೊಂಡಂತಾಗುತ್ತದೆ. ಪ್ರದರ್ಶನಕ್ಕೆ ಭೇಟಿ ನೀಡಿದ ಅನೇಕರು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ನನ್ನ ಹಲವಾರು ಚಿತ್ರಗಳನ್ನು ಸಂರಕ್ಷಿಸಿ ಇಟ್ಟುಕೊಂಡಿರುವುದಾಗಿ ತಿಳಿಸಿದರು,” ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಮುಂದೇನು..? ರಾಜ್ಯದ ಇತರೆ ಜಿಲ್ಲೆಗಳು ಅಥವಾ ಸ್ಥಳಗಳ ಜನರಿಗೂ ಈ ಪ್ರದರ್ಶನದ ಭಾಗ್ಯ ಲಭ್ಯವಾಗಲಿದೆಯೇ..? ಎಂಬ ಪ್ರಶ್ನೆಗೆ , ಆ ವಿಷಯ ಪ್ರಾಯೋಜಕತ್ವವನ್ನು ಆಧರಿಸಿದೆ ಎಂದು ಥಟ್ಟನೆ ಚಂದ್ರನಾಥ್ ಉತ್ತರಿಸಿದರು.
“ನನ್ನ ಬಳಿ ರಾಮಾಯಣಕ್ಕೆ ಸಂಬಂಧಿಸಿದ ೧೦೦ ಕಲಾಕೃತಿಗಳಿವೆ. ಆ ಕಲಾಕೃತಿಗಳ ಪ್ರದರ್ಶನವನ್ನೂ ಸಹ ಆಯೋಜಿಸುವುದು ನನ್ನ ಬಯಕೆ,” ಎಂದರು.

ಪುತ್ತೂರಿನಿಂದ ಬೆಂಗಳೂರುವರೆಗಿನ ಚಂದ್ರನಾಥ್ ಅವರ ಪ್ರಯಾಣ ಅದ್ಭುತವಾಗಿದೆ. ಅವರು ಅವರ ತಾಯಿ ಚಿತ್ರಗಳನ್ನು ಬಿಡಿಸುವುದನ್ನು ನೋಡುತ್ತಾ ಬೆಳೆದರು. ತಮ್ಮ ತಾತನವರು ಓರ್ವ ಶಿಲ್ಪ ಕಲಾವಿದರಾಗಿದ್ದು ಅವರಿಂದ ಯಾವ ರೀತಿ ಪ್ರೇರಣೆ ಪಡೆದರು ಎಂದು ಹೆಮ್ಮೆಯಿಂದ ಸ್ಮರಿಸಿಕೊಂಡರು. ಕೆನ್ ಸ್ಕೂಲ್ ಆಫ್ ಆರ್ಟ್ನ ವಿದ್ಯಾರ್ಥಿ ಆಗುವುದಕ್ಕಿಂತಲೂ ಮುಂಚೆ ಇವರು, ಕೆ.ಕೆ. ಹೆಬ್ಬಾರ್ ಹಾಗೂ ಕನ್ನೆಪಾಡಿ ರಾಮಕೃಷ್ಣ ಭಟ್ ಅವರು ಹಾಗೂ ಇನ್ನಿತರರ ಕೆಲಸಗಳನ್ನು ನೋಡುತ್ತಾ ಕಲೆಯನ್ನು ಮೈಗೂಡಿಸಿಕೊಳ್ಳುತ್ತಾ ಪೂರಕವಾದ ಮಾರ್ಗದಲ್ಲಿ ನಡೆದರು. ಮಲ್ಲಿಗೆ ಎಂಬ ಕನ್ನಡದ ಪತ್ರಿಕೆಯೊಂದರಲ್ಲಿ ಚಿತ್ರಕಲಾವಿದರಾಗಿ ಕೆಲಸಕ್ಕೆ ಸೇರಿದ ಚಂದ್ರನಾಥ್ , ನಂತರ ಸುಧಾ ವಾರಪತ್ರಿಕೆಗೆ ಸೇರ್ಪಡೆಗೊಂಡರು. ಕಲೆಯಲ್ಲಿನ ಅವರ ಆಸಕ್ತಿ ಇವರನ್ನು ಶಾಂತಿನಿಕೇತನದಿಂದ ಫೆಲೊಷಿಪ್ ಪಡೆಯುವಂತೆ ಮಾಡಿತು. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿರುವ ಚಂದ್ರನಾಥ್ , ವಿಶ್ವದ ಅನೇಕ ಸ್ಥಳಗಳಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಿದ್ದಾರೆ.

ಓರ್ವ ಚಿತ್ರಕಲಾವಿದ, ಪ್ರಿಂಟ್‌ಮೇಕರ್, ಪೇಂಟರ್ ಹಾಗೂ ನಿರ್ದೇಶಕರಾಗಿ ಚಂದ್ರನಾಥ್ ಆಚಾರ್ಯ ಅವರು ಫ್ಯಾಂಟಸಿ ಜಗತ್ತನ್ನು ಸುಲಭವಾಗಿ ಪ್ರವೇಶಿಸಿ, ವಿವಿಧ ಕಾಲ್ಪನಿಕ ಪಾತ್ರಗಳಿಗೆ ಜೀವ ತುಂಬಿ, ಯಾವುದೇ ಕಟು ಟೀಕೆಗಳಿಲ್ಲದೆ ಸಮಕಾಲೀನ ಬೆಳವಣಿಗೆಗಳಿಗೆ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತಾರೆ. ರಾಜ ಹಾಗೂ ರಾಣಿಯರ ಕುರಿತಂತೆ ಇವರಲ್ಲಿರುವ ಆಸಕ್ತಿ ಮತ್ತು ಅವರಲ್ಲಿನ ಸಂಭಾವ್ಯ ಸಹಜ ಅಪೇಕ್ಷೆಗಳನ್ನು ತಮ್ಮ ರಾಜರ ಸರಣಿಯಲ್ಲಿ ಅತ್ಯದ್ಭುತವಾಗಿ ಬಿಂಬಿಸುತ್ತಾರೆ. ಎಲ್ಲಕ್ಕಿಂತಲೂ ಮಿಗಲಾಗಿ ಅವರ ನಮ್ರತೆ ತುಂಬಾ ಪ್ರಶಂಸನೀಯ.

– ಆಶಾಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು

ENGLISH SUMMARY : 

-Asha Krishnaswamy

On canvas, Chandranath brings mythological figures come alive Bengaluru With time, the tastes of people do change, and it is a natural process. But certain things never lose appeal. One example is Indian paintings depicting epics such as the Mahabharata and Ramayana. When one sees the watercolour painting series of well-known artist Chandranath Acharya, the characters in these two mythologies come alive. His paintings will undoubtedly be remembered for their aesthetic appeal, composition, inventiveness, detailing, and subtle colour depiction.  With his gigantic contribution, he has undoubtedly set a standard for judging art work.Chandranath has created a wonderful opportunity for Bengalureans to peek into the world of Purana (mythology).

The characters in the Mahabharata come alive in the exhibition of Chandranath. The ongoing exhibition at the Indian Institute of World Culture (IIWC), Basavanagudi, is titled: Odyssey to a Great Epic. It is going to conclude on June 23.A walk through the newly opened art gallery of the IIWC displaying his works makes one wonder how passionate, dedicated and talented he is. In these days of absurdist art becoming an unwritten rule, classical painting comes as a welcome art form. Of course, he is also known for his surrealistic paintings, in which he has captured contemporary developments and trends. The paintings on display remind us of the Chandamama illustrations as well as Raja Ravi Verma’s priceless artworks. Chandranath knows no introduction to art connoisseurs as they are familiar with his hundreds of illustrations. He had done a series of illustrations for Prof. A Ra Mitra’s Kumara Vyasa Bharata series, published by Kannada weekly magazine Sudha, in the 1980s. He had also done an impressive series for the ‘Vachana Bharata’ series for the same magazine. It is a fact that his illustrations contributed significantly to the increased circulation of the weekly. He says that his nearly two-decade stint with Sudha magazine was also a learning process for him, he humbly says, while recalling his association with a host of artists, including S Ramesh, G K Satya, and Simha, among others. Only a person with an open mind and a love for mythology can get so involved in producing such masterpieces, which would have to be preserved well for the present and posterity. What made Chandranath hold the exhibition? He candidly says, “But for the IIWC, I would not have done it. The organisers could get sponsors, and I am here. When you ask his opinion on modern art or absurd art, he just smiles and says, “There are different types of art. I too have experimented a lot.

Art should appeal to common man also.” How long does it take for him to keep a painting like the Bheeshma lying on an arrow bed or Lord Krishna lying after being hit by an arrow on his toe? “On average, I take 6 to 8 hours for each illustration. My imagination of mythology characters gets reflected on the canvas,” he says. In his work, one can’t see very bright colours such as red or blue. There are apparent differences between his works and those of Chandamama. “I deliberately choose shades that are pleasing to the eyes. I believe paintings should reflect daily life. There should be no unrealistic approach to depicting mannerisms. I don’t over glamorise my subjects,” he points out. What has been the response to the art show in a city like Bengaluru, where vehicular traffic population indirectly prohibits people from stirring out of their homes to experience culture and music? “Oh! I am surprised and overwhelmed by the response to the show. I never imagined a person like me, who hails from a small place like Udupi, could draw such a huge crowd daily for the exhibition. The reach is very impressive. On demand by the people, the ongoing exhibition, which was scheduled to conclude on June 16, has been extended till June 23. I have displayed 53 paintings. I don’t want to sell any of them because there will be a discontinuity in the theme. Many visitors told me that they have preserved my illustrations published in Sudha magazine, “he proudly says. What next? Will people elsewhere in the state get an opportunity to see the exhibition? He immediately says that much depends on the availability of sponsorship. I have 100 illustrations regarding the Ramayana epic. I would like to conduct an exhibition of those works, “he says.Chandranath’s journey from Puttur to Bengaluru is amazing. He grew up seeing his mother drawing on a slate. He proudly recalls how he was inspired by his sculptor grandfather. Before he became a student at Ken School of Art, he was on the right track of art learning by seeing KK Hebbar’s work and Kannepadi Ramakrishna Bhat’s, among others. He joined Mallige Kannada magazine as an illustrator and later switched to Sudha magazine. His quest to learn had taken him to Santiniketan on a fellowship. A recipient of many awards, Chandranath conducted his exhibitions across the globe. As an illustrator, printmaker, painter, as well as art director, Chandranath easily enters the fantasy world, humanises larger-than-life characters, and displays his responses to contemporary developments without cynicism. His fascination for kings and queens and their probable innate desires are well portrayed in his King series. More than anything, his modesty is appealing.