ಚಾಮುಂಡಿ ಬೆಟ್ಟದಲ್ಲಿ 2ನೇ ದಿನಕ್ಕೆ ಕಾಲಿಟ್ಟ ರಸ್ತೆ ಬದಿ ವ್ಯಾಪಾರಿಗಳ ಬಂದ್:  ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಸಲ್ಲಿಕೆ…

ಮೈಸೂರು,ಸೆ,7,2019(www.justkannada.in): ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮಲ್ಟೀಲೇವಲ್ ಪಾರ್ಕಿಂಗ್ ಉದ್ಘಾಟನೆ ಹಿನ್ನಲೆ ಚಾಮುಂಡಿ ಬೆಟ್ಟದ ರಸ್ತೆ ಬದಿ ಅಂಗಡಿ ಗಳನ್ನು ತೆರವು ಮಾಡುವಂತೆ ಜಿಲ್ಲಾಡಳಿತ ಅದೇಶ ನೀಡಿರುವುದನ್ನ ವಿರೋಧಿಸಿ ವ್ಯಾಪಾರಿಗಳು ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.

ರಸ್ತೆ ಬದಿ ಅಂಗಡಿ ಗಳನ್ನು ತೆರವು ಮಾಡುವಂತೆ ಜಿಲ್ಲಾಡಳಿತ ಅದೇಶ ಹೊರಡಿಸಿರುವುದನ್ನ ವಿರೋಧಿಸಿ ಚಾಮುಂಡಿ ಬೆಟ್ಟದಲ್ಲಿ ಅಂಗಡಿ ಹಾಗೂ ರಸ್ತೆ ಬದಿ ವ್ಯಾಪಾರಿಗಳು  ಪ್ರತಿಭಟನೆ ನಡೆಸುತ್ತಿದ್ದಾರೆ. ಅವೈಜ್ಞಾನಿಕವಾಗಿ ಸ್ಥಳಾಂತರ ಮಾಡುತ್ತಿದೆ.ಇಲ್ಲಿನ ವ್ಯಾಪಾರಿಗಳಿಗೆ ಮಳಿಗೆಗಳನ್ನೇ ನೀಡಿಲ್ಲ. ಕಟ್ಟಡದ ಕಾಮಗಾರಿ ಬಾಕಿ ಇದ್ರು ಈ ರೀತಿ ಜಿಲ್ಲಾಡಳಿತ ಅದೇಶ ಮಾಡಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಚಾಮುಂಡಿ ಬಬೆಟ್ಟದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದು, ಇಂದು ಸಂಜೆ ಗ್ರಾಮಸ್ಥರು ಹಾಗೂ ವ್ಯಾಪಾರಿಗಳ ಜೊತೆ ಜಿಲ್ಲಾಧಿಕಾರಿ ಸಭೆ ನಡೆಸಲಿದ್ದಾರೆ. ಈ ವೇಳೆ ತೆರವಿಗೆ ಕಾಲಾವಕಾಶ ನೀಡಲು ವ್ಯಾಪಾರಿಗಳು ಒತ್ತಾಯ ಹಾಕುವ ಸಾಧ್ಯತೆ ಇದೆ.

 ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಮನವಿ..

ಚಾಮುಂಡಿ ಬೆಟ್ಟದಲ್ಲಿ ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ಮುಚ್ಚುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವ್ಯಾಪಾರಸ್ಥರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ವ್ಯಾಪಾರಸ್ಥರು, ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಂಗಡಿಗಳನ್ನು ಮುಚ್ವಿದರೆ ನಾವು ಬೀದಿ ಪಾಲಾಗುತ್ತೇವೆ. ಈ ಕುರಿತು ಸರ್ಕಾರದ ಗಮನ ಸೆಳೆಯಿರಿ ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಸಿದ್ದರಾಮಯ್ಯ ಅವರು ಹೇಳಿದರು.

key words: chamundi hills-street-side- traders –protest- Appeal-former CM Siddaramaiah