ಚಂಪಾ ಷಷ್ಟಿ ಉತ್ಸವ : ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…

ದಕ್ಷಿಣ ಕನ್ನಡ ,ಡಿಸೆಂಬರ್,15,2020(www.justkannada.in):  ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವದ ಹಿನ್ನೆಲೆ ಸೇವೆಗಳಿಗೆ ಮುಂಗಡ ನೋಂದಾಯಿಸಿಕೊಂಡಿರುವ ಭಕ್ತಾದಿಗಳನ್ನು ಹೊರತುಪಡಿಸಿ ಎಲ್ಲಾ ಅಂತರ್‌ ರಾಜ್ಯ ಹಾಗೂ ಅಂತರ್‌ ಜಿಲ್ಲಾ ಭಕ್ತರಿಗೆ ನಿರ್ಬಂಧ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಕೋವಿಡ್‌ 19 ಮುಂಜಾಗ್ರತಾ ಕ್ರಮವಾಗಿ ಡಿ.17ರಿಂದ ಡಿ.20ರವರೆಗೆ ಎಲ್ಲಾ ಅಂತರ್‌ ರಾಜ್ಯ ಹಾಗೂ ಅಂತರ್‌ ಜಿಲ್ಲಾ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ದೇವಳದ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಧಿಕಾರಿಗಳ ಉಲ್ಲೇಖದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.champa-shashti-festival-kukke-subramanya-temple-ordered-restriction

ಕೋವಿಡ್‌ ನಿಯಮ ಪಾಲನೆ ಮಾಡುವ ನೆಲೆಯಲ್ಲಿ ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ಅಂತರ್‌ ಜಿಲ್ಲೆ ಹಾಗೂ ಅಂತರ್‌ ರಾಜ್ಯದ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಆಗಮನವನ್ನು ಡಿ.17ರಿಂದ ಡಿ.20ರ ವರೆಗೆ ನಿಷೇದಿಸಲಾಗಿದೆ.

english summary….

Champa Shashti Utsava: Visitors to Kukke Subramanya restricted
Subramanya, Dec. 15, 2020 (www.justkannada.in): The Dakshin Kannada Deputy Commissioner K.V. Rajendra has issued orders restricting devotees from the State and other places to the famous Kukke Subramanya temple during the Champa Shasthi car festival.champa-shashti-festival-kukke-subramanya-temple-ordered-restriction
A press release issued by the Office of the Deputy Commissioner of Dakshin Kannada stated that apart from the devotees who have registered in advance to take part in the Rathotsava, other visitors will not be allowed as a COVID-19 pandemic precautionary measure. All the interstate and other state visitors have been restricted from Dec. 17 to Dec. 20.
Keywords: Kukke Subramanya/ Champa Shashti/ visitors restricted
—————————

Key words: Champa Shashti Festival-Kukke Subramanya –temple- ordered – restriction