ಕೊಟ್ಟ ಹಣ ವಾಪಸ್ ನೀಡದ ಹಿನ್ನೆಲೆ: ಅಣ್ಣನ ಜತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ….

Promotion

ಚಾಮರಾಜನಗರ,ಜ,28,2020(www.justkannada.in): ಕೊಟ್ಟ ಹಣವನ್ನ ವಾಪಸ್ ನೀಡದ ಹಿನ್ನೆಲೆ ಅಣ್ಣನ ಜತೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಕೊಲೆಯಾದ ಪತಿ. ರಶ್ಮಿ ಎಂಬಾಕೆಯೇ ಹಣದ ಆಸೆಗೆ ಬಿದ್ದು ತನ್ನ ಗಂಡನನ್ನೇ ಕೊಲೆಗೈದ ಪತ್ನಿ. ರಶ್ನಿ ಸುಬ್ರಹ್ಮಣ್ಯ ಜತೆ 2ನೇ ವಿವಾಹವಾಗಿದ್ದಳು. ಈ ನಡುವೆ ಸುಬ್ರಹ್ಮಣ್ಯ ಪತ್ನಿ ರಶ್ಮಿಬಳಿ ಹಣ ಪಡೆದು ಕ್ರಿಕೆಟ್ ಬೆಟ್ಟಿಂಗ್ ಗೆ ಸುರಿದು ಹಣ ಕಳೆದುಕೊಂಡಿದ್ದರು.

ಈ ನಡುವೆ ಪತ್ನಿ ರಶ್ಮಿ ಹಣಕ್ಕಾಗಿ ಪತಿ ಸುಬ್ರಹ್ಮಣ್ಯಗೆ ಕಿರುಕುಳ ನೀಡಿದ್ದಾಳೆ. ನಂತರ ಅಣ್ಣನ ಜತೆ ಸೇರಿ ಗಂಡನನ್ನೇ ಕಿಡ್ನಾಪ್ ಮಾಡಿ ಐದು ದಿನಗಳ ಕಾಲ ಗೃಹಬಂಧನದಲ್ಲಿರಿಸಿದ್ದಳು ಎನ್ನಲಾಗಿದೆ. ಈ ವೇಳೆ ಗಂಡನ ಮೇಲೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದು ನಂತರ ಮುಡಿಗುಂಡ ನಿವಾಸಕ್ಕೆ ಕರೆತಂದು ಬಿಟ್ಟಿದ್ದಳು.

ಹಲ್ಲೆಯಿಂದಾಗಿ ಪತಿ ಸುಬ್ರಹ್ಮಣ್ಯ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಬ್ರಹ್ಮಣ್ಯ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸುಬ್ರಹ್ಮಣ್ಯ ಸಾಯುವ ಮುನ್ನ ಪೊಲೀಸರಿಗೆ ಮರಣಪೂರ್ವ ಹೇಳಿಕೆ ನೀಡಿದ್ದು ಈ ನಡುವೆ ಆರೋಪಿ ರಶ್ಮಿಯನ್ನ ಪೊಲೀಸರು ಬಂಧಿಸಿದ್ದಾರೆ.

Key words: chamarajanagar-wife-mureder-husbend-money