‘ಮ್ಯಾನ್ Vs ವೈಲ್ಡ್’ ನಲ್ಲಿ ರಜನಿಕಾಂತ್ ತಮಾಷೆಯ ಮೇಮ್ಸ್ ; ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿ ಥಲೈವಾ ಅಭಿಮಾನಿಗಳು

0
326

 

ಮೈಸೂರು, ಜ.28 : (www.justkannada.in news) ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರದಲ್ಲಿ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿದ್ದಾರೆ. ಈ ಸುದ್ಧಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಫ್ಯಾನ್ಸ್ ಗಳು ಸೂಪರ್ ಮೇಮ್ಸ್ ಗಳನ್ನು ಹರಿಯ ಬಿಡುತ್ತಿದ್ದಾರೆ.

ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಸದ್ಯದಲ್ಲೇ ಮತ್ತೊಬ್ಬ ಸ್ಟಾರ್ ನಟ ಅಕ್ಷಯ್ ಕುಮಾರ್ ಶೂಟಿಂಗ್ ತಂಡದ ಜತೆ ಸೇರ್ಪಡೆಗೊಳ್ಳುವರು.

ಪ್ರವಾಸಿಗರು ಬಾರದಿರುವ ಪ್ರದೇಶಗಳನ್ನು ನೋಡಿಕೊಂಡು ಸುಲ್ತಾನ್ ಬತ್ತೆರಿ ಹೆದ್ದಾರಿ, ಮದ್ದೂರು ಮತ್ತು ಕಲ್ಕೆರೆ ಅರಣ್ಯ ಭಾಗಗಳಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಉತ್ತರ ಭಾರತದ ಅರಣ್ಯ ಪ್ರದೇಶಗಳಲ್ಲಿ ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಶೂಟಿಂಗ್ ನಲ್ಲಿ ತೊಡಗಿದ್ದು ಈ ಹಿಂದೆ ವ್ಯಾಪಕ ಸುದ್ದಿಯಾಗಿತ್ತು. ಆದರೆ ಇದೀಗ ತಲೈವಾ, ಅರಣ್ಯಕ್ಕೆ ಆಗಮಿಸಿರುವುದು ಅಭಿಮಾನಿಗಳಿಗೆ ಹಲವಾರು ಮೇಮ್ಸ್ ಗಳನ್ನು ಮಾಡಲು ಪ್ರೇರಣೆ ನೀಡಿದೆ.

 

Rajanikanth-bandipura-man vs wild-shooting-karnataka-mysore-fans-meems
man vs style

ರಜಿನಿ ಅವರ ಚಲನಚಿತ್ರಗಳನ್ನು ನೋಡಿದವರು ಸಿಂಹಗಳು, ಚಿರತೆಗಳು ಅಥವಾ ಹಾವುಗಳೊಂದಿಗೆ ಸೂಪರ್ ಸ್ಟಾರ್ ಹೋರಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. #Rajinikanth ಮತ್ತು #ManvsWild ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವಿಟರ್ ಟ್ರೆಂಡಿಂಗ್ ಆಗಿದೆ,

ಕೆಲವು ಅಭಿಮಾನಿಗಳು ತಲೈವಾ ಬಂದ್ಮೇಕೆ ಅದು ‘ ಮ್ಯಾನ್ ವರ್ಸಸ್ ಸ್ಟೈಲ್ ‘ ಕಾರ್ಯಕ್ರಮವಾಗಿದೆ ಎಂದೂ, ಮತ್ತೆ ಕೆಲವರು ವನ್ಯಜೀವಿಗಳಿಗೆ ಈಗ ಉಳಿವಿನ ಪ್ರಶ್ನೆ ಎಂದು, ರಜನಿಕಾಂತ್ ವರ್ಸಸ್ ವೈಲ್ಡ್ ಲೈಫ್ ..ಹೀಗೆ ಹತ್ತು ಹಲವು ತಮಾಷೆಯ ಮೇಮ್‌ ಮತ್ತು ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

KEY WORDS : Rajanikanth-bandipura-man vs wild-shooting-karnataka-mysore-fans-meems

ENGLISH SUMMARY :

Rajinikanth fans are all excited as the South superstar will feature in adventure show Man Vs Wild. The survival in the wild series hosted by Bear Grylls will be shot in the Bandipur forest of Karnataka.
Rajinikanth has cast an impression among all his fans, that he can do anything and everything. The “Yenna Rascala, Mind it” move has floored everyone time and again, with fans now thinking it would be the animals in the wild who would have to be careful of Rajinikanth and not the other way round.