ರಥದ ಚಕ್ರಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ..

ಚಾಮರಾಜನಗರ,ಮೇ,16,2022(www.justkannada.in):  ಗುಂಡ್ಲುಪೇಟೆ ತಾಲ್ಲೂಕಿನ  ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸ್ಕಂದಗಿರಿಯಲ್ಲಿ(ಪಾರ್ವತಿ ಬೆಟ್ಟ) ನಿನ್ನೆ ನಡೆದ ರಥೋತ್ಸವದ ವೇಳೆ ರಥದ ಚಕ್ರ ಹರಿದು ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ನಿನ್ನೆ ರಥೋತ್ಸವದಲ್ಲಿ  ರಥದ ಚಕ್ರ ಹರಿದು ಕಂದೇಗಾಲ ಗ್ರಾಮದ ಸರ್ಪಭೂಷಣ್(27) ಸೇರಿ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಕಬ್ಬಳ್ಳಿ ಗ್ರಾಮದ ಸ್ವಾಮಿ(40) ಎಂಬುವವರು ಕಾಲು ಮುರಿದು ಗಾಯಗೊಂಡಿದ್ದರು. ಗಾಯಗೊಂಡಿದ್ದ ವ್ಯಕ್ತಿಗೆ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಬಳಿಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ‌ ದಾಖಲಿಸಲಾಗಿತ್ತು.

ಆದರೆ ಸ್ವಾಮಿ ಅವರು ಚಿಕಿತ್ಸೆ ಫಲಕಾರಿಯಾಗಿದೆ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಕ್ತರು ಒಮ್ಮೇಲೆ ತೇರು ಎಳೆದಿದ್ದರಿಂದ ರಥ ವೇಗವಾಗಿ ಮುಂದೆ ಚಲಿಸಿತು. ಆಗ ನೂಕು ನುಗ್ಗಲು ಉಂಟಾಗಿ ಸರ್ಪಭೂಷಣ್ ಕೆಳಕ್ಕೆ ಬಿದ್ದು ಚಕ್ರಕ್ಕೆ ಸಿಲುಕಿದರು. ನಂತರ ಅವರನ್ನ ಆಸ್ಪತ್ರೆಗೆ ಸಾಗಿಸುವಾಗ ಸರ್ಪಭೂಷಣ್ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.

Key words:chamarajanagar- roit-Death- three