ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ಕೋಟಿಗೂ ಅಧಿಕ ಹಣ ಸಂಗ್ರಹ..

Promotion

.ಚಾಮರಾಜನಗರ,ಆ,28,2019(www.justkannada.in): ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಚಾಮರಾಜನಗರದಲ್ಲಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

ಪ್ರತಿ ತಿಂಗಳಂತೆ ಈ ಬಾರಿ ಕೋಟಿಗೂ ಅಧಿಕ ಆದಾಯ ಬಂದಿದೆ. ಒಂದು ತಿಂಗಳಲ್ಲಿ ಬರೋಬ್ಬರಿ 1,27, 87,341 ರೂ ನಗದು ಸಂಗ್ರಹವಾಗಿದ್ದು, ಜತೆಗೆ 28 ಗ್ರಾಂ ಚಿನ್ನ, 620 ಗ್ರಾಂ ಬೆಳ್ಳಿ ವಸ್ತು ಸಹ ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾಗಿದೆ. ಒಂದು ತಿಂಗಳ ಮೊತ್ತ ಒಂದು ಕೋಟಿ ದಾಟಿದ್ದು, ಮಾದೇಶ್ವರ ಕೋಟ್ಯಾಧೀಶನಾಗಿದ್ದಾನೆ.

ಹುಂಡಿ ಎಣಿಕೆ ಕಾರ್ಯ ಸಾಲೂರು ಮಠದ ಹಿರಿಯ ಶ್ರೀ ಮತ್ತು ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದಿದೆ. ಶ್ರೀಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದಕ್ಕೆ ಇಷ್ಟೊಂದು ಹಣ ಸಂಗ್ರಹ ಸಾಕ್ಷಿಯಾಗಿದೆ.

 

Key words: chamarajanagar-Male Mahadeshwara Hills- – collection –month-crore