ಜಾಗದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ….

Promotion

ಚಾಮರಾಜನಗರ,ಡಿ,31,2019(www.justkannada.in): ಜಮೀನಿನ ಅಕ್ಕ ಪಕ್ಕದ ಜಾಗಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ತಾರಕ್ಕಕ್ಕೇರಿ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪುಟ್ಟಸ್ವಾಮಪ್ಪ (59) ಕೊಲೆಯಾದ ವ್ಯಕ್ತಿ.  ಹತ್ಯೆ ಮಾಡಿದ ಸೋಮಪ್ಪ @ ಸೋಮೇಶ್ವರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.  ಸೋಮಪ್ಪ ಮತ್ತು ಪುಟ್ಟಸ್ವಾಮಪ್ಪ ನಡುವೆ ಜಮೀನಿನ  ವಿಚಾರದಲ್ಲಿ ಮೊದಲಿನಿಂದಲೂ ಆಗಾಗ ಜಗಳವಾಗುತ್ತಿತ್ತು.

ಈ ನಡುವೆ ಇಂದು ಮುಂಜಾನೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡ ಸೋಮಪ್ಪ  ಪುಟ್ಟಸ್ವಾಮಪ್ಪಗೆ ಕಲ್ಲಿನಿಂದ ಹೊಡೆದು  ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿವೈಸ್ಪಿ ಮೋಹನ್, ಇನ್ಸ್ ಪೆಕ್ಟರ್ ಮಂಜು, ನೀಡಿ ಪರಿಶೀಲನೆ ನಡೆಸಿದರು.

Key words: chamarajanagar-land- dispute- murder