ಕಾರು ತಡೆದ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ ಶಾಸಕ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್…

ಬೆಳಗಾವಿ,ಡಿ,31,2019(www.justkannada.in):  ತಮ್ಮ ಕಾರನ್ನ ತಡೆದ ಪೊಲೀಸ್ ಅಧಿಕಾರಿಯೊಬ್ಬರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ಅವಾಜ್ ಹಾಕಿದ ಘಟನೆ ಇಂದು ನಡೆದಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಸಂಕೇಶ್ವರಪಟ್ಟಣದ  ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರರು. ಈ ವೇಳೆ ಎಎಸ್ ಐ ವೊಬ್ಬರು ಅಂಬಿರಾವ್  ಪಾಟೀಲ್ ಅವರ ಕಾರನ್ನ ತಡೆದಿದ್ದಾರೆ. ವಾಹನ ತಡೆದಿದ್ದಕ್ಕೆ ಕೆಂಡಾಮಂಡಲರಾದ ಅಂಬಿರಾವ್ ಪಾಟೀಲ್  ಎಎಸ್ ಐಗೆ ಅವಾಜ್ ಹಾಕಿದ್ದಾರೆ.

ಈಗ ಏನ್ ಆಯ್ತು ಹೋಗು ಕೆಲಸ ನೋಡು. ನಾನು ಯಾರು ಅಂತಾ  ನಿನಗೆ ಗೊತ್ತಿಲ್ವಾ..? ಎಂದು ಕಿಡಿಕಾರಿದ್ದು  ಅಂಬಿರಾವ್ ಪಾಟೀಲ್ ಅವಾಜ್ ಗೆ ಎಎಸ್ ಐ ಸುಮ್ಮನಾಗಿ ತೆರಳಿದರು.

Key words: belagavi- Ramesh jarakiholi’s son-in-law -Ambirao Patil – outrage-police officer