ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಭಾರಿ ಗಾತ್ರದ ಹೆಬ್ಬಾವು ಸೆರೆ…

Promotion

ಚಾಮರಾಜನಗರ,ಸೆ,1,2019(www.justkannada.in): ರೈತನ ಜಮೀನಿನಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನ ಹಿಡಿದು ಕಾಡಿಗೆ ಬಿಡಲಾಗಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ದಾಸನಹುಂಡಿ ಗ್ರಾಮದ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಸೆರೆಯಾಗಿದೆ. ಹೆಬ್ಬಾವು ಸುಮಾರು 12 ಅಡಿ ಉದ್ದ 60 ರಿಂದ 70 ಕೆ.ಜಿ ತೂಕವಿದೆ ಎಂದು ಹೇಳಲಾಗುತ್ತಿದೆ. ಗ್ರಾಮದ ವೆಂಕಟರರಡ್ಡಿ ಜಮೀನಿನಲ್ಲಿ ಕಾಣಿಸಿಕೊಂಡದ್ದು,  ಈ ಬೃಹದಾಕಾರದ ಭಾರೀ ಗಾತ್ರದ ಹೆಬ್ಬಾವು ನೋಡಿ  ಗ್ರಾಮಸ್ಥರು ಕೆಲಕಾಲ ದಂಗಾದರು.

ಹೆಬ್ಬಾವುವನ್ನ ಉರಗ ತಜ್ಞ ಮಹೇಶ್ ಸೆರೆಹಿಡಿದು ಬಿಆರ್ ಹಿಲ್ಸ್ ಕಾಡಿಗೆ ಬಿಟ್ಟಿದ್ದಾರೆ.

Key words: chamarajanagar- huge -python –farm-forset