ಗೌರಿ ಗಣೇಶ ಹಬ್ಬ ಹಿನ್ನೆಲೆ: ಪೌರಕಾರ್ಮಿಕರಿಗೆ ಬಾಗೀನ ನೀಡಿ ಶುಭ ಹಾರೈಸಿದ ಮೈಸೂರು ಪಾಲಿಕೆ ಕಾರ್ಪೋರೇಟರ್….

ಮೈಸೂರು,ಸೆ,1,2019(www.justkannada.in): ಗೌರಿ ಗಣೇಶ ಹಬ್ಬದ ಹಿನ್ನೆಲೆ ಪೌರ ಕಾರ್ಮಿಕರಿಗೆ ಮೈಸೂರು ಮಹಾನಗರ ಪಾಲಿಕೆ  ಸದಸ್ಯರಾದ ಮಾ.ವಿ ರಾಮ್ ಪ್ರಸಾದ್  ಬಾಗೀನ ನೀಡಿ ಶುಭ ಹಾರೈಸಿದರು.

ನಗರದ 55 ನೇ ವರ್ಡ್ ನ ಪಾಲಿಕೆ ಸದಸ್ಯ ಮಾ.ವಿ ರಾಮ್ ಪ್ರಸಾದ್  ಅವರು ಪೌರ ಕಾರ್ಮಿಕರಿಗೆ ಹಬ್ಬದ ಶುಭಾಶಯ ಕೋರಿ ಬಾಗಿನ ನೀಡಿ ಹಬ್ಬದ ಉಡುಗರೆ ಕೊಟ್ಟರು. ಪ್ರತಿ ವರ್ಷದಂತೆ ಈ ವರ್ಷವೂ ಬಾಗೀನ ಅರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಗರದ ಚಾಮುಂಡಿಪುರಂನಲ್ಲಿ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಪೌರಕಾರ್ಮಿಕರಿಗೆ ಬಾಗೀನ ನೀಡಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಪಾಲಿಕೆ ಸದಸ್ಯ ಮಾ.ವಿ ರಾಮ್ ಪ್ರಸದ್,  ಪ್ರತಿ ದಿನ ಪೌರಕಾರ್ಮಿಕರು ನಗರದ ಸ್ವಚ್ಚತೆಯಲ್ಲಿ ತೊಡಗಿರುತ್ತಾರೆ. ಹಬ್ಬದಂದೂ ಕೂಡ ನಗರದ ಸ್ವಚ್ಚತೆಯಲ್ಲಿ ತೊಡಗಿರುತ್ತಾರೆ. ಅವರಿಗೆ ಹಬ್ಬದ ಶುಭಾಶಯ ಕೋರಿ ಅವರು ಹಬ್ಬವನ್ನು ಸಂಭ್ರಮಿಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

Key words: Gauri Ganesha- festival-  Mysore –city corporation-Corporator- Civil Workers