ಕೊರೊನಾ ಸೋಂಕಿನ ನಿಯಂತ್ರಣ ಕಾರ್ಯದಲ್ಲಿ ಚಾಮರಾನಗರ ಜಿಲ್ಲೆ ‘ಬೆಸ್ಟ್’

kannada t-shirts

ಮೈಸೂರು, ಆಗಸ್ಟ್ 21, 2020 (www.justkannada.in): ಕೊರೊನಾ ಸೋಂಕಿನ ನಿರ್ವಹಣೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ಕೈಗೊಂಡ ಕಾರ್ಯಗಳು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ.

ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಹೋಂ ಕ್ವಾರಂಟೈನ್ ಗೆ ಸೂಚಿಸುವುದು ಹಾಗೂ ಅವರನ್ನು ಕೋವಿಡ್ ಟೆಸ್ಟ್ ಮಾಡಿಸುವಲ್ಲಿ ಚಾಮರಾಜನಗರ ಜಿಲ್ಲಾಡಳಿತದ ಕಾರ್ಯ ಮಾದರಿಯಾಗಿದೆ.

ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಗಳನ್ನು ಉಲ್ಲಂಘನೆ ಸಂಬಂಧಪಟ್ಟಂತೆ ಅತೀ ಹೆಚ್ಚು ಪ್ರಕರಣ (40 ಎಫ್ ಐ ಆರ್) ದಾಖಲಿಸಲಾಗಿದೆ. ಈ ಮೂಲಕ ಸರಕಾರದ ಸೂಚನೆಗಳನ್ನು ಉಲ್ಲಂಘಿಸದಂತೆ ಚಾ.ನಗರ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜತೆಗೆ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂದು ಸಾವಿರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವಲ್ಲಿ ಚಾ.ನಗರ ಅಧಿಕಾರಿಗಳ ಕಾರ್ಯ ಇತರೆ ಜಿಲ್ಲೆಗಳಿಗೂ ಮಾದರಿಯಾಗಿದೆ. ಈ ಮೂಲಕ ಕೋವಿಡ್ 19 ನಿಯಂತ್ರಣ ಸಂಬಂಧ ಜಿಲ್ಲಾಡಳಿತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.

 

 

website developers in mysore