Friday, August 21, 2026

BDA Apartments

Home Front Page ಪ್ರತಿವರ್ಷವು ಉತ್ತಮ ಮಳೆ ಬೆಳೆಯಾಗುವಂತೆ ಸಿಎಂ ಬಿಎಸ್ ವೈ ಪ್ರಾರ್ಥನೆ…

ಪ್ರತಿವರ್ಷವು ಉತ್ತಮ ಮಳೆ ಬೆಳೆಯಾಗುವಂತೆ ಸಿಎಂ ಬಿಎಸ್ ವೈ ಪ್ರಾರ್ಥನೆ…

ಮೈಸೂರು, ಆಗಸ್ಟ್, 21, 2020(www.justkannada.in): ರಾಜ್ಯದ ಎಲ್ಲೆಡೆ ಜಲಾಶಯಗಳು ತುಂಬಿ ತುಳುಕುತ್ತಿದೆ. ಈ ವರ್ಷ ನಿರೀಕ್ಷೆ ಮಿರಿ ಎಲ್ಲಾ ಕಡೆ ಒಳ್ಳೆ ಬೆಳೆ ಆಗುತ್ತಿದ್ದು, ಪ್ರತಿ ವರ್ಷವು ಹೀಗೆ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಸತತ ಐದನೇ ಬಾರಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ದೊರೆತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.krs-bagina-worship-cm-bs-yeddyurappa-rain

ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಮೈಸೂರು ದಸರಾ ಆಚರಣೆ ಮಾಡಲಾಗುವುದು. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.  ನಂಜನಗೂಡು ಟಿಎಚ್ಒ ನಾಗೇಂದ್ರ ಆತ್ಮಹತ್ಯೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

Key words: KRS- bagina-worship cm bs yeddyurappa- rain