“ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ ; ಅಭಿಮಾನಿಗಳಿಂದ ರಕ್ತದಾನ”

Promotion

ಮೈಸೂರು,ಫೆಬ್ರವರಿ,16,2021(www.justkannada.in) : ಚಲನಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 44ನೇ ಜನ್ಮದಿನದ ಪ್ರಯುಕ್ತ ದರ್ಶನ್ ಅಭಿಮಾನಿಗಳು ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮುಖಾಂತರ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.jkಇದೇ ಸಂಧರ್ಭದಲ್ಲಿ ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜು  ಮಾತನಾಡಿ, ಹಾರ, ಶಾಲು ಹಾಗೂ ಕೇಕಿಗೆ  ಹಣವನ್ನು ದುಂದು ವೆಚ್ಚ ಮಾಡಿ ಹಣವನ್ನು ಪೋಲು ಮಾಡುವುದರ ಬದಲು ರಕ್ತ ಧಾನ ಮಾಡುವ ಮುಖಾಂತರ ಅನೇಕ ಜನರಿಗೆ ಜೀವ ಉಳಿಸುವ ಕಾರ್ಯವನ್ನು ದರ್ಶನ್ ಅಭಿಮಾನಿ ಬಳಗದವರು ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ರಕ್ತದಾನ ಮಾಡಿ ಅನೇಕ ಜನರಿಗೆ ಜೀವ ಉಳಿಸುವ ಕಾರ್ಯ ಮುಂದುವರೆಯಲಿ ಎಂದರು.

ಲಯನ್ಸ್ ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಲಯನ್ ಗಿರೀಶ್ ಮಾತನಾಡಿ, ಯುವಕರು ಹೆಚ್ಚಾಗಿ ರಕ್ತ ನೀಡಿದರೆ ಅನೇಕ ಜೀವಗಳು ಉಳಿಯುತ್ತವೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಜೀವ ಉಳಿಸುವುದಕ್ಕಿಂದ ಬೇರೆ ಇನ್ನು ಯಾವ ಕೆಲಸವು ಒಳ್ಳೆಯದಲ್ಲ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಎನ್.ಆರ್.ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್, ಬಿಜೆಪಿ ಮುಖಂಡ ಜೆ.ಪಿ.ಜಯಪ್ರಕಾಶ್, ಸಮಾಜ ಸೇವಕ ಸುಚಿಂದ್ರ, ಅಭಿಮಾನಿ ಬಳಗದ ಅಧ್ಯಕ್ಷ ನವೀನ್, ರಾಘವೇಂದ್ರ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ಸ್ಯಾಮ್ಯುವೆಲ್ ವಿಲ್ಸನ್, ಮಮತಾ ಮುಂತಾದವರು ಭಾಗವಹಿಸಿದ್ದರು.

key words :  Challenging-Star-Darshan-Birthday-Blood-donation-fans