Sunday, October 4, 2026

BDA Apartments

Home Front Page ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿ ಕ್ರಮದಿಂದ ಹಿಂದೆ ಸರಿಯಬೇಕು : ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ...

ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿ ಕ್ರಮದಿಂದ ಹಿಂದೆ ಸರಿಯಬೇಕು : ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್

ಬೆಂಗಳೂರು,ಡಿಸೆಂಬರ್,27, 2020(www.justkannada.in) : ಕೇಂದ್ರ ಸರ್ಕಾರ ಈ ಕೂಡಲೇ ಕೃಷಿ ಮಸೂದೆ ಜಾರಿ ಮಾಡುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಕರ್ನಾಟಕ ಹೈ ಕೂರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Teachers,solve,problems,Government,bound,Minister,R.Ashok

ಸಮೃದ್ಧಿಯ ಭಾಗವಾಗಿದ್ದ ರೈತರಿಗೆ ರಾಸಾಯನಿಕ ಬಳಸುವುದನ್ನು ಕಲಿಸಿದ, ಕಳಪೆ ಬೀಜಗಳನ್ನು ವಿತರಿಸಿದ ನಾವೇ ಅವರು ಆತ್ಮಹತ್ಯೆಗೆ ಇಳಿಯುವಂತೆ ಮಾಡಿದ್ದೇವೆ. ಈ ಪರಿಸ್ಥಿತಿಯನ್ನು ಅರಿತು ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ತಾನು ತರಲು ಉದ್ಧೇಶಿಸಿರುವ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದಿದ್ದಾರೆ.

ಈ ಹಿಂದಿನ ಎಷ್ಟೋ ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿದು ತಾವು ತರಲು ಮುಂದಾದ ಮಸೂದೆಗಳನ್ನು, ಯೋಜನೆಗಳನ್ನು ಕೈಬಿಟ್ಟಿವೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹಿಂದೆ ಇಡೀ ಭಾರತದ ನೊಂದ ರೈತರಿದ್ದಾರೆ, ಇದನ್ನು ಸರ್ಕಾರ ಅರಿಯಬೇಕು” ಎಂದು ಹೇಳಿದರು.

central,government,should,back,off,farm,bill,Retired,Justice,HN Nagamohana Das

ಇಂದು ಭೂಸುಧಾರಣೆ, ಅದಕ್ಕೆ ತರುತ್ತಿರುವ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ಬೀಜ ಕಾಯಿದೆ ತಿದ್ದುಪಡಿ, ಎಲ್ಲವೂ ರೈತರನ್ನು ಗುಲಾಮಗಿರಿಯತ್ತ ತಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

 key words : central-government-should-back-off-farm-bill-Retired-Justice-HN Nagamohana Das