ಸಾವಿರ ರೂ.ನತ್ತ ದರ: ಸಿಲಿಂಡರ್‌ ಸಬ್ಸಿಡಿಗೆ ಕತ್ತರಿ ಹಾಕಲು ಕೇಂದ್ರದ ಚಿಂತನೆ!

Promotion

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಮುಂದಿನ ದಿನಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು 1,000 ರೂ. ಸನಿಹಕ್ಕೆ ತಲುಪಲಿದೆ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 100 ರೂ. ಹೆಚ್ಚಿಸುವ ಕುರಿತಾಗಿನ ಪ್ರಸ್ತಾವನೆಯನ್ನು ತೈಲ ಕಂಪೆನಿಗಳು ಕೇಂದ್ರ ಸರಕಾರದ ಮುಂದೆ ಇರಿಸಿವೆ.

ಸರಕಾರ ಇದಕ್ಕೆ ಸಮ್ಮತಿಸಿದಲ್ಲಿ ಎಲ್‌ಪಿಜಿ ಸಹಸ್ರ ರೂ.ಗಳ ಗಡಿ ದಾಟಲಿರುವುದು ನಿಶ್ಚಿತ. ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕೂಡ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ಗ್ರಾಹಕರು ಪ್ರತೀ ಎಲ್‌ಪಿಜಿ ಸಿಲಿಂಡರ್‌ಗೆ 1,000 ರೂ. ವರೆಗೆ ಪಾವತಿಸಲು ಸಿದ್ಧರಿದ್ದಾರೆ ಎಂಬುದು ಸರಕಾರ ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆಸಿರುವ ಆಂತರಿಕ ಮೌಲ್ಯಮಾಪನದ ವೇಳೆ ತಿಳಿದುಬಂದಿದೆ.