ಮತ್ತೆ ಕೊರೊನಾ ಕಾಟ: ಚೀನಾದಲ್ಲಿ ಮತ್ತೆ ಉಲ್ಬಣಿಸುತ್ತಿದೆ ಸೋಂಕು

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಚೀನಾದಲ್ಲಿ 107 ಕೋಟಿಗೂ ಹೆಚ್ಚು ಜನರಿಗೆ ಸಂಪೂರ್ಣ ಲಸಿಕೆ ಹಾಕಿದ್ದರೂ ಈಗ ಕೋವಿಡ್​ ಸಾಂಕ್ರಾಮಿಕತೆ ಮತ್ತೆ ಉಲ್ಬಣಗೊಳ್ಳುತ್ತಿದೆ.

14 ಪ್ರಾಂತ್ಯಗಳಲ್ಲಿ ಮಹಾಮಾರಿ ಹರಡಿ ಕಳವಳ ಉಂಟು ಮಾಡಿದೆ. ಬಂದರುಗಳ ಪ್ರವೇಶದ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಕ್ಟೋಬರ್​ 17ರಿಂದ 29ರ ನಡುವೆ ಸುಮಾರು 377 ಪ್ರಕರಣಗಳು ಸ್ಥಳಿಯವಾಗಿ ಹರಡಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಅಧಿಕಾರಿಗಳು ತಿಳಿಸಿದ್ದಾರೆ.

2020ರ ಆರಂಭದಲ್ಲೇ ಸಾಂಕ್ರಾಮಿಕತೆಗೆ ಚೀನಾ ಕಡಿವಾಣ ಹಾಕಿದ್ದರೂ ಆಗಾಗ ಸೋಂಕು ಸ್ಫೋಟಗೊಳ್ಳುತ್ತಲೇ ಇದ್ದು ಸರ್ಕಾರದ ತಲೆನೋವನ್ನು ಹೆಚ್ಚಿಸಿದೆ.