ಕೇಂದ್ರದ ಬಜೆಟ್ ನ ಸಂಪೂರ್ಣ ಹೈಲೈಟ್ಸ್  ಹೀಗಿದೆ.

ನವದೆಹಲಿ,ಫೆಬ್ರವರಿ,1,2022(www.justkannada.in) :  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2022-23ನೇ ಸಾಲಿನ ಬಜೆಟ್​ ಮಂಡಿಸಿದರು. ಬಜೆಟ್ ನಲ್ಲಿ ಜನ ಸಾಮಾನ್ಯರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕನೇ ಬಾರಿಗೆ  ಬಜೆಟ್ ಮಂಡಿಸಿದ್ದಾರೆ.  ಇದು ನರೇಂದ್ರ ಮೋದಿ ನೇತೃತ್ವ ಸರ್ಕಾರದ 10ನೇ ಬಜೆಟ್. ಕೊರೊನಾ ಕಾರಣದಿಂದಾಗಿ ಬಜೆಟ್​ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಳೆದ 2 ವರ್ಷಗಳಿಂದ ಬಜೆಟ್ ಪ್ರತಿ ಮುದ್ರಿಸಲಾಗುತ್ತಿಲ್ಲ. ಬದಲಾಗಿದೆ ಡಿಜಿಟಲ್​ ರೂಪದಲ್ಲಿ ಬಜೆಟ್ ಮಂಡಿಸಿದರು.

ಬಜೆಟ್ ನಲ್ಲಿ ಕೃಷಿ, ಡಿಜಿಟಲೀಕರಣ, ಮಹಿಳಾ ಸಬಲೀಕರಣ, ಬ್ಯಾಂಕಿಂಗ್ ಸೇರಿ ಹಲವು ವಲಯಗಳಿಗೆ ಒತ್ತು ನೀಡಲಾಗಿದೆ. ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್, 2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯ. ನಾಗರಿಕರನ್ನು ಸಶಕ್ತಗೊಳಿಸುವ ಆದ್ಯತೆ ನಮ್ಮ ಸರ್ಕಾರದ್ದಾಗಿದೆ. ವಿಶ್ವದಲ್ಲಿಯೇ ಭಾರತದ ಆರ್ಥಿಕತೆ ಅತೀ ವೇಗವಾಗಿ ಬೆಳೆಯುತ್ತಿದೆ. ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಬಜೆಟ್ ನ ಮುಖ್ಯಾಂಶಗಳು ಈ ಕೆಳಕಂಡಂತಿದೆ.

ಕಚ್ಚಾ ವಜ್ರದ ಮೇಲೆ ಆಮದು ಸುಂಕ ಇಳಿಕೆ. ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ ಯಾವುದೇ ಬದಲಾವಣೆ ಇಲ್ಲ.

ಚಿನ್ನ-ವಜ್ರದ ಮೇಲಿನ ಸುಂಕ ಇಳಿಕೆ ಮಾಡಿ ಘೋಷಿಸಲಾಗಿದೆ.  ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದ್ದು ಹೀಗಾಗಿ ಆಭರಣಗಳ ಮೇಲಿನ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಇನ್ನು ಚಪ್ಪಲಿ, ಬಟ್ಟೆಗಳ ಮೇಲಿನ ಬೆಲೆನ ತೆರಿಗೆ ಇಳಿಕೆ ಮಾಡಲಾಗಿದೆ. ಮೊಬೈಲ್, ಮೊಬೈಲ್ ಚಾರ್ಜರ್ ಮೇಲಿನ ತೆರಿಗೆ ಕೂಡ ಇಳಿಕೆ ಮಾಡಲಾಗಿದೆ. ಇನ್ನೂ ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಮೇಲಿನ ಬೆಲೆ, ಚರ್ಮದ ಉತ್ಪನ್ನಗಳ ಮೇಲಿನ ಬೆಲೆ, ಎಲೆಕ್ಟ್ರಾನಿಕ್ ಉಪ ಕರಣಗಳ ಬೆಲೆಯನ್ನೂ ಇಳಿಕೆ ಮಾಡಲಾಗಿದೆ.

ಹಾಗೆಯೇ ಆರ್ ಬಿಐ ನಿಂದಲೇ ಡಿಜಿಟಲ್ ಕರೆನ್ಸಿ ಆರಂಭ ಮಾಡಲಾಗುವುದು . ಎಸ್.ಸಿ. ಎಸ್ ಟಿ ರೈತರಿಗೆ ಆರ್ಥಿಕ ನೆರವು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಸಹಕಾರ. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ರೂಪಿಸಲಾಗುವುದು. 2022 ರಲ್ಲೇ ದೇಶದಲ್ಲಿ 5 ಜಿ ಸೇವೆ ಆರಂಭವಾಗಲಿದೆ. ಪ್ರತಿ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬಲ್ ಕೇಬಲ್ ಆರಂಭಾಗಲಿದೆ. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ (ಒಂದು ದೇಶ, ಒಂದು ನೋಂದಣಿ) ವ್ಯವಸ್ಥೆ ಸ್ಥಾಪನೆ. ಆಸ್ತಿ ನೋಂದಣಿಗೆ ಡಿಜಿಟಲ್ ವ್ಯವಸ್ಥೆ ಜಾರಿ,ಆಸ್ತಿ ನೋಂದಣಿ ಇನ್ಮುಂದೆ ಡಿಜಿಟಲೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ಗ್ರಾಮ ಸೌಕರ್ಯ ಅಭಿವೃದ್ಧಿ ಆರ್ಥಿಕ ನೆರವುಉ. ಎಲ್ಲಾ ಫೋಸ್ಟ್ ಆಫೀಸ್ ಗಳಲ್ಲೂ ಬ್ಯಾಕಿಂಗ್ ವ್ಯವಸ್ಥೆ ಮಾಡಲಾಗುವುದು

ಕೃಷಿ ಉತ್ಪನ್ನದ ರಾಸಾಯನಿಕ, ವೈದ್ಯಕೀಯ ತಯಾರಿಕೆ ಮೇಲೆ ತೆರಿಗೆ ವಿನಾಯಿತಿ ಮೂಲಕ ಹಲವು ಹಂತದ ಮುಂದುವರಿದ ತಯಾರಿಕೆಗೆ ಆತ್ಮ ನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಗೆ ಪ್ರೋತ್ಸಾಹ.

ಆದಾಯ ತೆರಿಗೆ ಯಲ್ಲಿ ಯಾವುದೇ ಬದಲಾವಣೆ ಇಲ್ಲ, ಹಿಂದಿನ ಟ್ಯಾಕ್ಸ್ ಸ್ಲಾಬ್ ಮುಂದುವರಿಯುತ್ತದೆ

ಸದನದ ಗಮನಕ್ಕೆ – ಒಟ್ಟು GST ಸಂಗ್ರಹಣೆ ಜನವರಿಯಲ್ಲಿ 1 ಲಕ್ಷ 40 ಸಾವಿರದ 9 ನೂರು ಕೋಟಿ ಇದು GST ಆರಂಭವಾದಾಗಿನಿಂದ ಅತೀ ಹೆಚ್ಚು ಸಂಗ್ರಹವಾಗಿದೆ. ಕೋವಿಡ್ ನಂತರದ, ತ್ವರಿತ ಆರ್ಥಿಕ ಚೇತರಿಕೆಯ ಸ್ಪಷ್ಟ ನಿದರ್ಶನ

ಮುಂದಿನ ವರ್ಷದ ವರೆಗೆ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ. 2023 ಮಾರ್ಚ್ ವರೆಗೆ ತೆರಿಗೆ ಕಟ್ಟಬೇಕಾಗಿಲ್ಲ

ಪರ್ಯಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು. ಸಹಕಾರ ಸಂಘಗಳು ನೀಡುತ್ತಿದ್ದ 18 ಮತ್ತು 1.5 % ತೆರಿಗೆ ಹೆಚ್ಚುವರಿ ಶುಲ್ಕಕ್ಕೆ 15 % ಗೆ. ಒಂದು ಕೋಟಿಯಿಂದ 10 ಕೋಟಿ ವ್ಯವಹಾರ ಇರುವ ಸಹಕಾರ ಸಂಘಗಳ ತೆರಿಗೆ 12 ರಿಂದ 7 % ಗೆ ಇಳಿಕೆ . ಗ್ರಾಮೀಣ ಮತ್ತು ಕೃಷಿ ಸಮುದಾಯಕ್ಕೆ ಲಾಭ.

ತನ್ನ ರಿಟರ್ನ್ ಸಲ್ಲಿಸುವಾಗ ಆದಾಯವನ್ನು ಘೋಷಿಸಿ, ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶ.

ವಿಶ್ವಾಸಾರ್ಹ ತೆರಿಗೆ, ವ್ಯಾಜ್ಯವನ್ನು ಕಡಿಮೆ ಮಾಡಿ, ದೋಷಗಳನ್ನು ಸರಿಪಡಿಸಿ, ವೇಗವರ್ಧಿತ ವಾಗಿ ತೆರಿಗೆ ಸಂಗ್ರಹ. ಅಂತ್ಯದ ನವೀಕರಿಸಿದ ರಿಟರ್ನ್ ಅನ್ನು ಫೈಲ್ ಮಾಡಲು ಅವಕಾಶ

ರಕ್ಷಣಾ ಬಜೆಟ್ ನ ಶೇ.35ರಷ್ಟು ಅನುದಾನ ಸಂಶೋಧನೆಗೆ ಮೀಸಲು. ರಕ್ಷಣಾ ಇಲಾಖೆಯಲ್ಲಿ ಖರೀದಿ ಮತ್ತು ಸಂಶೋಧನೆಗೆ ಖಾಸಗಿ ಸಹಭಾಗಿತ್ವ.

ಸೋಲಾರ್ ವಿದ್ಯುತ್ ಉತ್ಪಾದನೆಗೆ 19,500 ಕೋಟಿ ರೂಪಾಯಿ. 2030ರ ವೇಳೆಗೆ 8 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ.

ರಕ್ಷಣಾ ಇಲಾಖೆಯಲ್ಲೂ ಆತ್ಮನಿರ್ಭರಕ್ಕೆ ಒತ್ತು. ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ಶೇ.68ರಷ್ಟು ಸ್ಥಳೀಯ ಸಾಮಗ್ರಿ ಖರೀದಿ ಕಡ್ಡಾಯ. ಇದರೊಂದಿಗೆ ಪರ್ಸೆಂಟೇಜ್ ವ್ಯವಹಾರಕ್ಕೆ ಕಡಿವಾಣ.

ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ. ಪ್ರತಿಯೊಂದು ಗ್ರಾಮಕ್ಕೂ ಆಫ್ಟಿಕಲ್ ಪೈಬರ್ ಮೂಲಕ ಇಂಟರ್ ನೆಟ್ ವ್ಯವಸ್ಥೆ. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್ ನೆಟ್ ಸೌಲಭ್ಯ.

2022ರಲ್ಲೇ 5ಜಿ ತರಂಗಾಂತರ ಹರಾಜು. 5ಜಿಗೆ ಅಗತ್ಯ ಮೂಲಸೌಲಭ್ಯ ನಿರ್ಮಾಣಕ್ಕೆ ಒತ್ತು. 5 ಜಿ ಸಂಬಂಧಿ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ ಧನ.

ಬ್ಯಾಟರಿ ಬದಲಾವಣೆ ಯೋಜೆ. ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಜಾರಿಗೆ ತೀರ್ಮಾನ. ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ. ಒನ್ ನೇಷನ್, ಒನ್ ರಿಜಿಸ್ಟ್ಏಷನ್ ವ್ಯವಸ್ಥೆ ಸ್ಥಾಪನೆ.

ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರದ ನಿರ್ಧಾರ. ಉದ್ಯೋಗ ಸೃಷ್ಟಿಯಲ್ಲಿ ಬಂಡವಾಳ ಹೂಡಿಕೆಯಿಂದ ಸಹಾಯ.

ಎಸ್ ಸಿ, ಎಸ್ ಟಿ ಮತ್ತು ರೈತರಿಗೆ ಆರ್ಥಿಕ ನೆರವು. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ರೈತರಿಗೆ ಸಹಕಾರ.

ಎಲೆಕ್ಟ್ರಿಕ್ ವಾಃನಗಳ ಅಭಿವೃದ್ಧಿಗೆ ಒತ್ತು. ಜಮೀನು ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು. 8 ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜಿಟಲೀಕರಣ.

ಪಿಎಂ ಆವಾಜ್ ಯೋಜನೆಗೆ 80 ಸಾವಿರ ಕೋಟಿ ರುಪಾಯಿ ಮೀಸಲು. ಇ-ಪಾಸ್ ಪೋರ್ಟ್ ಜಾರಿ.ಚಿಪ್ ಒಳಗೊಂಡ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ಜಾರಿಗೆ ನಿರ್ಧಾರ.

25 ಸಾವಿರ ಅನವಶ್ಯಕ ನಿಯಮಗಳು ರದ್ದು. 1,483 ಅನುಪಯುಕ್ತ ಕಾನೂನು ರದ್ದು. ಲೈಸೆನ್ಸ್ ರಾಜ್ ಕಿತ್ತು ಹಾಕಲು ಕ್ರಮ. ಗ್ರಾಮ ಸೌಕರ್ಯಕ್ಕೆ ವಿಶೇಷ ಅನುದಾನ.

ಪೋಸ್ಟ್ ಆಫೀಸ್ ಗಳಿಗೆ ಬ್ಯಾಂಕ್ ಸ್ವರೂಪ. ಎಟಿಎಂ, ಡಿಜಿಟಲ್ ಬ್ಯಾಂಕ್ ಸೇವೆ. 1.4 ಲಕ್ಷ ಪೋಸ್ಟ್ ಆಫೀಸ್ ಗಳ ಸ್ವರೂಪ ಬದಲು. 74 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ.

2023ರಿಳಗೆ 18 ಲಕ್ಷ ಮನೆಗಳ ನಿರ್ಮಾಣದ ಗುರಿ. ಗಡಿ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಒತ್ತು. ಮೂಲಸೌಲಭ್ಯ, ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ.

ದೇಶದ 5 ನದಿಗಳ ಜೋಡಣೆಗೆ ಸಮ್ಮತಿ. ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆ ಒಪ್ಪಿಗೆ. ಸೋಲಾರ್ ಪವರ್ ಗೆ 4,300 ಕೋಟಿ ರೂಪಾಯಿ. ನರ್ಮದಾ-ಗೋದಾವರಿ ನದಿ ಜೋಡಣೆ.

ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ. ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ 2.73 ಲಕ್ಷ ಕೋಟಿ ಘೋಷಣೆ. ಬೆಳೆ ಸಮೀಕ್ಷೆಗೆ ಡ್ರೋಣ್ ಬಳಕೆ.

ಪಿಎಂ ಗತಿ ಶಕ್ತಿ ಯೋಜನೆಗೆ 7 ಇಂಜಿನ್. 400 ಹೆಚ್ಚುವರಿ ಒಂದೇ ಭಾರತ್ ರೈಲು ಆರಂಭ. ರೈಲ್ವೆ ಇಲಾಖೆಯಿಂದ ಹೊಸ ಸೇವೆ. ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ಆದ್ಯತೆ.

ರಸ್ತೆ ನಿರ್ಮಾಣಕ್ಕೆ ಪ್ರಮುಖ ಆದ್ಯತೆ. 25 ಸಾವಿರ ಹೆಚ್ಚುವರಿ ಹೂಡಿಕೆ ಮಾಡಲಾಗುತ್ತಿದೆ. 2022ರ ಬಜೆಟ್ ಗೆ 4 ಆಧಾರ ಸ್ತಂಭಗಳು. ವೇಗದ ಸುರಕ್ಷಿತ ಸಾಗಾಣಿಕೆಗೆ ಆದ್ಯತೆ.

ಏರ್ ಇಂಡಿಯಾ ಮೇಲಿನ ಬಂಡವಾಳ ಸಂಪೂರ್ಣ ಹಿಂತೆಗೆಯಲಾಗಿದೆ. ಪಿಎಂ ಗತಿ ಶಕ್ತಿ ದೇಶದ ಆರ್ಥಿಕತೆಗೆ ವೇಗ ನೀಗಲಿದೆ. ದೇಶದ ಜಿಡಿಪಿ ಶೇ.9.2ರಷ್ಟು ಬೆಳವಣಿಗೆ.

ಶೀಘ್ರದಲ್ಲಿಯೇ ಎಲ್ ಐಸಿಯಿಂದ ಬಂಡವಾಳ ಹಿಂತೆಗೆತ, ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು. ಈ ಬಾರಿಯ ಬಜೆಟ್ ನಲ್ಲಿ ಆತ್ಮನರ್ಭರತೆಗೆ ಒತ್ತು. ದೇಶದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಮುಂದಿನ 25 ವರ್ಷಗಳಿಗೆ 6 ಆಧಾರ ಸ್ತಂಭಗಳನ್ನು ಗುರುತಿಸಲಾಗಿದೆ. ಇದು ದೂರದೃಷ್ಟಿಯ ಬಜೆಟ್ ಆಗಿದೆ. ಆತ್ಮನಿರ್ಬರ ಭಾರತದಡಿ 16 ಲಕ್ಷ ಉದ್ಯೋಗ ಸೃಷ್ಟಿ.

ಹರ್ ಘರ್, ನಲ ಜಲ್ ಯೋಜನೆ ಘೋಷಣೆ(ಪ್ರತಿ ಮನೆಗೆ ನಳ ಯೋಜನೆ). 12 ಕೋಟಿ ಮನೆಗಳಿಗೆ ನಳ್ಳಿ ನೀರು ಪೂರೈಸುವ ಗುರಿ. ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲು.

ಅಂಗನವಾಡಿಗಳಿಗೆ ಆಡಿಯೋ, ವಿಡಿಯೋ ವ್ಯವಸ್ಥೆ, 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನೀರು ಪೂರೈಕೆ. 3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ.

ಡಿಜಿಟಲ್ ವಿವಿ ಸ್ಥಾಪನೆ. ವಿಶ್ವದರ್ಜೆಯ ಡಿಜಿಟಲ್ ಯೂನಿರ್ವಸಿಟಿ ಸ್ಥಾಪನೆ. ಮಹಿಳಾ ಸಬಲೀಕರಣಕ್ಕೆ ಸಕ್ಷಮ ಅಂಗನವಾಡಿ ಯೋಜನೆ. 2 ಲಕ್ಷ ಅಂಗನವಾಡಿಗಳ ಉನ್ನತೀಕರಣ.

5 ನದಿಗಳ ಜೋಡಣೆಗೆ 44,605 ಕೋಟಿ ರೂಪಾಯಿ ಅನುದಾನ. ಮಾತೃಭಾಷೆಯಲ್ಲೇ ಡಿಜಿಟಲ್ ಪಾಠ ಅಭಿವೃದ್ಧಿ. ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಒತ್ತು. ಸಿರಿಧಾನ್ಯ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ.

ಸರ್ಕಾರಿ ಶಾಲೆ ಮಕ್ಕಳಿಗೆ ಒನ್ ಕ್ಲಾಸ್-ಒನ್ ಟಿವಿ ಕಾರ್ಯಕ್ರಮ. ಎಣ್ಣೆ ಕಾಳು ಬೆಳೆಯುವ ರೈತರಿಗೆ ಹೆಚ್ಚಿನ ಒತ್ತು. 200 ಟಿವಿ ಚಾನೆಲ್ ಗಳ ಮೂಲಕ ಪರ್ಯಾಯ ಪಾಠ.

ಸಣ್ಣ ಉದ್ದಿಮೆಗಳಿಗೆ 2023ರ ಮಾರ್ಚ್ ವರೆಗೂ ಕ್ರೆಡಿಟ್ ಸ್ಕೀಂ ವಿಸ್ತರಣೆ. 50 ಸಾವಿರ ರೂ. ನಿಧಿಯ ಮೊತ್ತ 5 ಲಕ್ಷ ಕೋಟಿಗೆ ಹೆಚ್ಚಳ. ಕೌಶಲಾಭಿವೃದ್ಧಿಗೆ ಆನ್ ಲೈನ್ ತರಬೇತಿ.

Key words: central-budget-minister-Nirmala sitharaman