ಕೇಂದ್ರ ಬಜೆಟ್ ರೈತರ ಪಾಲಿಗೆ ನಿರಾಸೆ, ನಿರೀಕ್ಷೆಯೆಲ್ಲಾ ಹುಸಿ- ಕುರುಬೂರು ಶಾಂತಕುಮಾರ್.

ಬೆಂಗಳೂರು,ಫೆಬ್ರವರಿ,1,2023(www.justkannada.in):  ಈ ಬಾರಿಯ ಕೇಂದ್ರ ಬಜೆಟ್ ರಾಜ್ಯದ ರೈತರಿಗೆ ನಿರಾಸೆ ತಂದಿದೆ. ನಾವು ಭಾರಿ ನಿರೀಕ್ಷೆಇಟ್ಟುಕೊಂಡಿದ್ದೆವು. ಎಲ್ಲಾ ಹುಸಿಯಾಗಿದೆ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದರು.

ಬಜೆಟ್ ಕುರಿತು ಮಾತನಾಡಿದ ಕುರುಬೂರು ಶಾಂತ ಕುಮಾರ್,  ಭದ್ರ ಮೇಲ್ದಂಡೆ ಯೋಜನೆಗೆ 5360 ಕೋಟಿ ಮೀಸಲಿಟ್ಟಿರುವುದನ್ನ ಹೊರತು ಪಡಿಸಿ ಬೇರೆ ಯಾವುದೇ ಕೊಡುಗೆ ನೀಡಿಲ್ಲ. ರೈತರ ಮಕ್ಕಳು ವಲಸೆ ಹೋಗುವುದನ್ನು ತಪ್ಪಿಸಲು ಯಾವುದೇ ಯೋಜನೆ ಅನುಷ್ಠಾನಗೊಳಿಸಿಲ್ಲ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಟ್ಟಾರೆ ಕೇಂದ್ರ ಬಜೆಟ್ ನಮ್ಮ ನಿರೀಕ್ಷೆಯನ್ನ ಹುಸಿಗೊಳಿಸಿದೆ ಎಂದರು.

ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ,  ಇಂದಿನ ಬಜೆಟ್ ನಲ್ಲಿ ರೈತಾಪಿ ವರ್ಗವನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ದೇಶದಲ್ಲಿ 100 ಕ್ಕೆ 60 ಭಾಗ ರೈತರಿದ್ದಾರೆ. ಎಲ್ಲಾ ಉದ್ಯಮಗಳು ಒಂದಲ್ಲಾ ಒಂದು ರೀತಿಯಲ್ಲಿ ರೈತರನ್ನು ಅವಲಂಬಿಸಿವೆ. ನಾವು ಕೂಡ ಈ ಸರ್ಕಾರಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ತೆರೆಗೆ ಕಟ್ಟುತ್ತೇವೆ. APMC ಕಾಯಿದೆ, ರೈತರ ಬೆಳಗೆ ನಿರ್ದಿಷ್ಟ ಬೆಲೆ, ಸಿರಿಧಾನ್ಯಗಳನ್ನ ಬೆಳೆಗಳಿಗೆ ಉತ್ತೇಜನ, ಮಾರುಕಟ್ಟೆ ಕೊಡಬೇಕಿತ್ತು. ರೈತರು, ಕೃಷಿಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲದ ಬಜೆಟ್ ಇದಾಗಿದೆ. ಇದೊಂದು ರೈತರ ಪಾಲಿನ ನಿರಾಸದಾಯಕ ಬಜೆಟ್ ಎಂದು ಟೀಕಿಸಿದರು.

ಹಾಗೆಯೇ ಕೈಗಾರಿಕೋದ್ಯಮಿ ಸುರೇಶ್ ಕುಮಾರ್ ಜೈನ್ ಪ್ರತಿಕ್ರಿಯಿಸಿ, ಮೈಸೂರಿಗೆ ಅಂತ ನಿರ್ದಿಷ್ಟವಾದ ಯೋಜನೆ ಏನೂ ಇಲ್ಲ. ಅದು ಒಂದು ಬೇಸರವಾಗಿದೆ. ಕೈಗಾರಿಕೋದ್ಯಮಕ್ಕೆ ವಿಶೇಷ ಒತ್ತು ನೀಡಿದೆ. ಚುನಾವಣೆ ಸಂದರ್ಭದಲ್ಲಿ ಇಂತ ಆಶಾದಾಯಕ ಬಜೆಟ್ ಮಂಡಿಸೋದು ಸಹಜ. ಆದರೆ, ಇವು ಅನುಷ್ಠಾನಕ್ಕೆ ಬರಬೇಕು. ಕೈಗಾರಿಕಾ ವಲಯಕ್ಕೆ 6 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ನಾವು ಶೇ. 93 ರಷ್ಟು ಖಾಸಗಿ ವಲಯದಲ್ಲಿ ಸಾಲ ಪಡೆದಿದ್ದೇವೆ. ಶೇ.7 ರಷ್ಟು ಮಾತ್ರ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದೇವೆ. ನಾವು ಉತ್ಪಾದನೆ ಮಾಡಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮುಖ್ಯ.ಇದೊಂದು ಸಮತೋಲನವಾದ ಬಜೆಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: Central budget – disappointment – farmers- Kuruburu Shanthakumar.