‘ಗಂಧದಗುಡಿ’ ಪ್ರಿ ರಿಲೀಸ್ ಕಾರ್ಯಕ್ರದಲ್ಲಿ ರಜನಿ, ಚಿರಂಜೀವಿ ಸೇರಿ ಖ್ಯಾತನಾಮರು ಭಾಗಿ ಸಾಧ್ಯತೆ

Promotion

ಬೆಂಗಳೂರು, ಅಕ್ಟೋಬರ್ 14, 2022 (www.justkannada.in): ಪವರ್ ಸ್ಟಾರ್ ಅಪ್ಪು ಅವರ ‘ಗಂಧದಗುಡಿ’ಚಿತ್ರದ ಪ್ರಿ ರಿಲೀಸ್ ಇವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 21ರಂದು ನಡೆಯಲಿದೆ.

ವಿಶೇಷ ಎಂದರೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೇರಿದಂತೆ ರಜನಿಕಾಂತ್, ಚಿರಂಜೀವಿ ಹಾಗೂ ಅಮಿತಾಬ್ ಬಚ್ಚನ್ ಸೇರಿದಂತೆ ಖ್ಯಾತ ನಾಮರು ‘ಗಂಧದಗುಡಿ’ ಪ್ರಿ ರಿಲೀಸ್ ಇವೆಂಟ್ ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಟೀಸರ್ ನಲ್ಲಿ ನೋಡಿರುವಂತೆ ಅಮೋಘ ವರ್ಷ ನಿರ್ದೇಶನದ ‘ಗಂಧದಗುಡಿ’ ಚಿತ್ರದಲ್ಲಿ ನಾಡಿನ ವನ್ಯಜೀವಿ ಸಂಪತ್ತಿನ ಸೌಂದರ್ಯವನ್ನು  ಅನಾವರಣಗೊಳಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ಇದಕ್ಕಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.