ಸಿಡಿ ಪ್ರಕರಣ: ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ದಾಖಲಿಸುವಂತೆ ಎಸ್ ಐಟಿಗೆ ಕೆ.ಎನ್  ರಾಜಣ್ಣ ಒತ್ತಾಯ…

Promotion

ತುಮಕೂರು,ಮಾರ್ಚ್,19,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಸಂಬಂಧ ಹೆಚ್.ಡಿಕೆಗೆ ಎಲ್ಲವೂ ಗೊತ್ತಿದೆ ಎಂದು ಹೇಳಿದ್ದಾರೆ. ಎಸ್ ಐಟಿ ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಒತ್ತಾಯಿಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿ ಮಹಾನಾಯಕ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ,  ಆ ಮಹಾನಾಯಕ ಯಾರು ಬೇಕಾದರೂ ಆಗಿರಬಹುದು . ವಿಜಯೇಂಧ್ರ, ಆರ್. ಅಶೋಕ್  ಮತ್ತೊಬ್ಬನ ಹೆಸರು ಹೇಳಬಹುದು.  ಹೆಚ್.ಡಿ ಕುಮಾರಸ್ವಾಮಿ ಒಕ್ಕಲಿಗರ ನಾಯಕ. ಅವರೇ ಆ ಮಹಾನಾಯಕ ಇರಬೇಕು ಎಂದು ಲೇವಡಿ ಮಾಡಿದರು.

CD case-former MLA- KN Rajanna -urges -SIT - record -HD Kumaraswamy -statement
ಕೃಪೆ- internet

ಹಾಗೆಯೇ ಹೆಚ್.ಡಿಕೆಗೆ ಎಲ್ಲವೂ ಗೊತ್ತಿದೆ. ಎಸ್ ಐಟಿ ಅವರ ಹೇಳಿಕೆಯನ್ನ ದಾಖಲಿಸಿಕೊಳ್ಳುವಂತೆ ಒತ್ತಾಯಿಸುತ್ತೇನೆ. ಸತ್ಯ ಹೊರಬರಲು ಹೆಚ್.ಡಿ ಕುಮಾರಸ್ವಾಮಿ ಸಹಕಾರ ನೀಡಲಿ ಎಂದು ಕೆ.ಎನ್ ರಾಜಣ್ಣ ಹೇಳಿದರು.

Key words: CD case-former MLA- KN Rajanna -urges -SIT – record -HD Kumaraswamy -statement