ಮಟ್ಕಾ, ಜೂಜಾಟ ಅಡ್ಡೆ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ: ಮೂವರು ಆರೋಪಿಗಳು ಅಂದರ್

Promotion

ಮೈಸೂರು,ಸೆ,7,2019(www.justkannada.in): ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಮೈಸೂರು ನಗರದ ಸಿ.ಸಿ.ಬಿ ಪೊಲೀಸರು ಮೂರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿದ್ದ ಗೌಸಿಯಾನಗರದ ಮುಜೀಬ್ (60), ಶಾಂತಿನಗರದ ಮಕ್ಬೂಲ್ (58), ಅಯೂಬ್‍ಖಾನ್ (52) ಬಂಧಿತ ಆರೋಪಿಗಳು. ಆರೋಪಿಗಳಿಂದ 12,570 ರೂ. ನಗದು ಹಾಗೂ 2 ಮೊಬೈಲ್ ಫೋನ್‍ಗಳು, ಮಟ್ಕಾ ದಂಧೆ ಬರೆದುಕೊಳ್ಳುತ್ತಿದ್ದ ಚೀಟಿಗಳನ್ನ ವಶಪಡಿಸಿಕೊಳ್ಳಲಾಗಿದೆ.

ಮೈಸೂರು ನಗರದ ಸಿ.ಸಿ.ಬಿ ಪೊಲೀಸರು ಮಾಹಿತಿ ಮೇರೆಗೆ   ನಿನ್ನೆ ದಾಳಿ ಮಾಡಿದ್ದರು. ಉದಯಗಿರಿ ಪೊಲೀಸ್ ಠಾಣೆ ಸರಹದ್ದು ಕಲ್ಯಾಣಗಿರಿ, 3ನೇ ಹಂತ, 7ನೇ ಕ್ರಾಸ್‍ನಲ್ಲಿರುವ ಎಂ.ಎಸ್.ಲೇಡೀಸ್ ಟೈಲರ್ ಅಂಗಡಿ ಬಳಿ ಪೊಲೀಸರು ದಾಳಿ ನಡೆಸಿದ್ದರು.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮೈಸೂರು ನಗರದ ಡಿಸಿಪಿ ಎಂ. ಮುತ್ತುರಾಜು ರವರು ಮತ್ತು ಸಿ.ಸಿ.ಬಿ ಯ ಪ್ರಭಾರ ಎ.ಸಿ.ಪಿ ಜಿ.ಎನ್. ಮೋಹನ್‍ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ಎ.ಎಸ್.ಐ ಆರ್.ರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

key words: CCB -police -attack – Matka –gambling-mysore