ಮೈಸೂರಿನಲ್ಲಿ ಆಕ್ಸಿಜನ್ ಘಟಕಗಳ ಮೇಲೆ ಸಿಸಿ ಟಿವಿ ಕಣ್ಗಾವಲು….

ಮೈಸೂರು,ಮೇ,7,2021(www.justkannada.in): ಕೊರೋನಾ 2ನೇ ಆರಂಭವಾಗುತ್ತಿದ್ದಂತೆ ಆಕ್ಸಿಜನ್ ಗಾಗಿ ಹಾಹಾಕಾರ ಉಂಟಾಗಿದೆ. ಈ ಮಧ್ಯೆ ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಮಾಡಲಾಗುತ್ತಿರುವ ಆರೋಪವೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಮೈಸೂರಿನಲ್ಲಿ ಆಕ್ಸಿಜನ್ ಘಟಕಗಳ ಮೇಲೆ ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ.jk

ಮೈಸೂರಿನಲ್ಲಿರುವ ಖಾಸಗಿ ಘಟಕಗಳ ಮೇಲೆ ಟಾಸ್ಕ್ ಫೋರ್ಸ್ ಕಮಿಟಿ ಅಧ್ಯಕ್ಷ ಪ್ರತಾಪ್ ಸಿಂಹ ನಿಗಾ ವಹಿಸಿದ್ದಾರೆ.  4 ಏಜೆನ್ಸಿಗಳಲ್ಲಿ ತಲಾ ಎರಡು ಕ್ಯಾಮೆರಾ ಅಳವಡಿಸಲಾಗಿದ್ದು,  24*7 ಮೊಬೈಲ್ ಮೂಲಕ ಮಾನಿಟರ್ ಮಾಡಲಾಗುತ್ತದೆ. ಸಿಸಿ ಕ್ಯಾಮರಾ ಅಳವಡಿಕೆಯಿಂದಾಗಿ ಅನಧಿಕೃತವಾಗಿ ಏಜೆನ್ಸಿಯಲ್ಲಿ ಆಕ್ಸಿಜನ್ ಪಡೆಯುವುದಕ್ಕೆ ಕಡಿವಾಣ ಬಿದ್ದಂತಾಗುತ್ತದೆ.cc-tv-surveillance-oxygen-components-mysore-mp-prathap-simha

ಮೈಸೂರಿನ ಆಸ್ಪತ್ರೆಗಳಿಗೆ ಆಕ್ಸಿಜನ್ ಕೋಟಾ ನಿಗದಿ ಮಾಡಲಾಗಿದ್ದು, ಅದನ್ನು ಹೊರತುಪಡಿಸಿ ಬೇರೆ ಕಡೆ ಸರಬರಾಜು ಮಾಡದಂತೆ ಕ್ರಮ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಬೇರೆ ಆಸ್ಪತ್ರೆಯವರು ನೇರವಾಗಿ ಖರೀದಿ ಮಾಡುವುದಕ್ಕೆ ಬ್ರೇಕ್ ಬೀಳಲಿದೆ ಎಂದು ಸಂಸದ ಪ್ರತಾಪ್‌ಸಿಂಹ ಮಾಹಿತಿ ನೀಡಿದ್ದಾರೆ.

Key words: CC TV- Surveillance -Oxygen Components – Mysore-MP Prathap simha