ಶಿಕ್ಷಣ ಸಚಿವರಿಗೆ ಖಾಸಗಿ ಶಾಲೆಗಳ ಸಮಸ್ಯೆ ಹೇಳಿದ ಸಿಬಿಎಸ್’ಸಿ, ಐಸಿಎಸ್’ಸಿ, ರಾಜ್ಯ ಪಠ್ಯಕ್ರಮ ಶಾಲೆಗಳ ಒಕ್ಕೂಟ

ಬೆಂಗಳೂರು, ಜುಲೈ 23, 2020 (www.justkannada.in):  ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ CISPMAM ಆಡಳಿತ ಮಂಡಳಿ ಸಭೆ ನಡೆಯಿತು.

ಸಿ.ಬಿ.ಎಸ್.ಸಿ., ಐ.ಸಿ.ಎಸ್.ಸಿ. ರಾಜ್ಯ ಪಠ್ಯಕ್ರಮ ಶಾಲೆಗಳ ಒಕ್ಕೂಟದಿಂದ ಮೈಸೂರು ಉಸ್ತುವಾರಿ ಸಚಿವರ ಭೇಟಿ ಮಾಡಿ ಖಾಸಗಿ ಶಾಲೆಯವರು ಅನುಭವಿಸುತ್ತಿರುವ ವಿಷಯಗಳ ಕುರಿತು ಚರ್ಚಿಸಲಾಯಿತು.

ಜುಲೈ 23ರಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ರವರು ಮೈಸೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಭೆಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ಖಾಸಗಿ ಶಾಲೆಗಳ ನಿಯೋಗವು ಮನವರಿಕೆ ಮಾಡಿಕೊಟ್ಟಿತ್ತು

ಹೀಗಾಗಿ ಇಂದು ಸಚಿವ ಸ್. ಟಿ ಸೋಮಶೇಖರ್ ನೇತೃತ್ವದಲ್ಲಿ ಶಿಕ್ಸಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಖಾಸಗಿ ವಿದ್ಯಾ ಸಂಸ್ಥೆಗಳ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರಲಾಯಿತು. ಕಳೆದ ಸಾಲಿನ ಶುಲ್ಕವನ್ನು ಪೋಷಕರು ಕಟ್ಟದೇ ಇರುವುದು ಹಾಗೂ ಈ ಸಾಲಿನ ಶುಲ್ಕವನ್ನೂ ಸಹ ಪಾವತಿ ಮಾಡದೇ ಇರುವ ವಿಷಯವನ್ನು ತಿಳಿಸಲಾಯಿತು. ಈಗಾಗಲೇ ಶಿಕ್ಷಕರು ಆನ್ ಲೈನ್ ಮೂಲಕ ಈ ಸಾಲಿನ ತರಗತಿಗಳನ್ನು ಪ್ರಾರಂಭ ಮಾಡಿದ್ದರೂ ಶುಲ್ಕವನ್ನು ಪಡೆಯಲು ಆಗದಿರುವುದು, ಬ್ಯಾಂಕುಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಪಡೆದಿರುವ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಿರುವುದು ಹಾಗೂ ಶಿಕ್ಷಕರ, ಶಿಕ್ಷಕೇತರ ಸಿಬ್ಬಂದಿಗಳ ವೇತನ ಪಾವತಿಸಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ನಿಯೋಗ ತಿಳಿಸಿತು.

ಸಭೆಯ ಮನವಿಗೆ ಸಂಬಂಧಿಸಿದಂತೆ ಸಚಿವರು ಸಹಾನುಭೂತಿಯಿಂದ ಎಲ್ಲವನ್ನೂ ಪರಿಶೀಲಿಸಿ, ಸರ್ಕಾರವು ಖಾಸಗಿ ಶಾಲೆಗಳ ಬಗ್ಗೆ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಮುಖ್ಯಸ್ಥರಾದ ಹೆಚ್.ವಿ.ರಾಜೀವ್, ಸಿ.ಐ.ಎಸ್.ಪಿ.ಎಂ.ಎ.ಎಂ. ಉಪಾಧ್ಯಕ್ಷರಾದ ಎಂ.ಎಲ್.ರವೀಂದ್ರ ಸ್ವಾಮಿ, ವೆಂಕಟೇಶ್, ಕಾರ್ಯದರ್ಶಿ ರಾಧಾಕೃಷ್ಣ, ವಿದ್ಯಾ ಸಂಸ್ಥೆಗಳ ಮುಖಂಡರಾದ ಸೆಂಟ್ ಜೋಸೆಪ್‍ನ ವಿಜಯ್ ಕುಮಾರ್, ಮಧು, ಶ್ರೀಶೈಲ ರಾಮಣ್ಣನವರ್, ಪ್ರಭಾಕರ್, ಗಣೇಶ್ ಉಪಸ್ಥಿತರಿದ್ದರು.