ಮಳೆಯ ಅವಾಂತರ: ಎದೆ ಮಟ್ಟದ ನೀರಿನಲ್ಲಿ ಶವ ಹೊತ್ತು ಸಾಗಿದ ಗ್ರಾಮಸ್ಥರು.

ಶ್ರೀರಂಗಪಟ್ಟಣ,ಆಗಸ್ಟ್,8,2022(www.justkannada.in):  ರಾಜ್ಯದಲ್ಲಿ ಮುಂಗಾರು ಚುರುಕುಗೊಂಡು ವ್ಯಾಪಕ ಮಳೆಯಾಗುತ್ತಿದ್ದು ಜಲಾಶಯಗಳು ಭರ್ತಿಯಾಗಿ ನದಿಗಳು ತುಂಬಿಹರಿಯುತ್ತಿದ್ದು ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಳೆಯ ಅವಾಂತರದಿಂದ ಎದೆ ಮಟ್ಟದ ನೀರಿನಲ್ಲಿ ಗ್ರಾಮಸ್ಥರು ಶವ ಹೊತ್ತು ಸಾಗಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರದಲ್ಲಿ ನಡೆದಿದೆ.

ಕೊಡಗು ಮೈಸೂರಿನಲ್ಲಿ ಭಾರಿ ಮಳೆಯಾದ ಹಿನ್ನೆಲೆ ಕಾವೇರಿ ಭೋರ್ಗರೆದು ಹರಿಯುತ್ತಿದ್ದು ಶ್ರೀರಂಗಪಟ್ಟಣ ವ್ಯಾಪ್ತಿಯ ದೇವಸ್ಥಾನಗಳು ಜಲಾವೃತವಾಗಿದೆ.  ಈ ಮಧ್ಯೆ ಮಹದೇವಪುರದ ಗ್ರಾಮಸ್ಥರು  ಕ್ಯಾನ್ಸರ್‌ನಿಂದ ನಿನ್ನೆ ಗ್ರಾಮದಲ್ಲಿ ಸುಲೋಚನಾ(48) ಎಂಬುವವರ ಶವಸಂಸ್ಕಾರಕ್ಕೆ ಪರದಾಡಿದ್ದಾರೆ.

ಪ್ರವಾಹದಿಂದಾಗಿ ಎದೆ ಮಟ್ಟದ ನೀರಿನಲ್ಲಿ ಗ್ರಾಮಸ್ಥರು ಶವ ಹೊತ್ತು ಸ್ಮಶಾನಕ್ಕೆ ತೆರಳಿದ್ದಾರೆ. ಕಾವೇರಿ ನದಿ ಭೋರ್ಗರೆತಕ್ಕೆ ಪ್ರತಿವರ್ಷ ಸ್ಮಶಾನದ ರಸ್ತೆ ಜಲಾವೃತವಾಗಿದ್ದು,  ಮಹಿಳೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರು ಪರದಾಡಿದ್ದಾರೆ, ಕೊನೆಗೆ ಪ್ರವಾಹದ ನೀರಲ್ಲೆ ಮಹಿಳೆಯ ಶವವನ್ನು ಗ್ರಾಮಸ್ಥರು ತೆಗೆದುಕೊಂಡು‌ ಹೋದರು. ಇನ್ನೂ ಕಾವೇರಿ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ, ಕಾವೇರಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬಳಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಬಾಳೆ,‌ ಕಬ್ಬಿನ ಗದ್ದೆ, ಅಡಕೆ‌ ತೆಂಗಿನ‌ ತೋಟಕ್ಕೆ‌ ನೀರು ನುಗ್ಗಿವೆ. ಹೆಚ್ಚಿನ ಪ್ರಮಾಣ ನೀರು ಬಿಟ್ಟಿರುವ ಕಾರಣ ನದಿ‌ಪಾತ್ರದಲ್ಲಿರುವ ಜನರು ಆತಂಕಗೊಂಡಿದ್ದಾರೆ.

Key words: caveri-river-krs-shrirangapatna-flood