2ಎಗೆ ಸಮನಾದ ಪ್ರವರ್ಗ ನೀಡಬೇಕು: ಸಿಎಂ ಬೊಮ್ಮಾಯಿ ಕೂಡಲೇ ಸ್ಪಷ್ಟ ನಿರ್ಧಾರಕ್ಕೆ ಬನ್ನಿ- ಜಯ ಮೃತ್ಯುಂಜಯ ಸ್ವಾಮೀಜಿ.

Promotion

ಬೆಂಗಳೂರು,ಮಾರ್ಚ್,23,2023(www.justkannada.in): ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ 2ಸಿ, 2ಡಿ ಮೀಸಲಾತಿಗೆ ಸಮ್ಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ತೆರವುಗೊಳಿಸಿರುವ ಕುರಿತು ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದಾರೆ.

ಹೈಕೋರ್ಟ್ ಆದೇಶವನ್ನ ಸ್ವಾಗತಿಸುತ್ತೇವೆ. 2ಸಿ 2ಡಿ ಮೀಸಲಾತಿ ಬಗ್ಗೆ  ಸಚಿವ ಸಂಪುಟದಲ್ಲಿ ಚರ್ಚಿಸಿಲ್ಲ ಸದ್ಯ ಮೀಸಲಾತಿಗೆ  ಇದ್ಧ ಅಡೆತಡೆ  ದೂರವಾಗಿದೆ. ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು.   2ಎಗೆ ಸಮನಾದ ಪ್ರವರ್ಗ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಸದ್ಯ ನಮಗೆ ಶೇ.5 ರಷ್ಟು ಮೀಸಲಾತಿ ಇದೆ.  ಇದನ್ನ ಶೇ.10ಕ್ಕೇ ಏರಿಸಿದರೂ ನಮಗೆ ಖುಷಿಯಾಗುತ್ತದೆ. ಸಚಿವ ಸಂಫುಟದಲ್ಲಿ ಚರ್ಚಿಸಬೇಕು.  ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Key words: category -equivalent – 2A –panchamasali-Jaya Mrityunjaya Swamiji.