Saturday, August 15, 2026

BDA Apartments

Home Front Page ವಿವಿಧ ಭಾಗ್ಯಗಳನ್ನ ಕೊಟ್ಟ ಸಿದ್ಧರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ- ಸಂಸದ ಪ್ರತಾಪ್ ಸಿಂಹ ಟೀಕೆ.

ವಿವಿಧ ಭಾಗ್ಯಗಳನ್ನ ಕೊಟ್ಟ ಸಿದ್ಧರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ- ಸಂಸದ ಪ್ರತಾಪ್ ಸಿಂಹ ಟೀಕೆ.

ಮಡಿಕೇರಿ,ಮಾರ್ಚ್,23,2023(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಗೊಂದಲ  ಭಾರಿ ಸುದ್ದಿಯಾಗಿದ್ದು ಈ ಬಗ್ಗೆ ಬಿಜೆಪಿ ನಾಯಕರ ಟೀಕೆ  ಮುಂದುವರೆದಿದೆ . ಇದೀಗ ಈ ಕುರಿತು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ,  ‘ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ. ಕ್ಷೇತ್ರ ಹುಡುಕಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ ಅಂದರೆ ಸಿದ್ದರಾಮಯ್ಯರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ ಎಂದಾಯಿತು. ಅವರ ಮೇಲೆ ಜನರಿಗೆ ವಿಶ್ವಾಸ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಬರುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

‘ದಕ್ಷಿಣ‌ ಕರ್ನಾಟಕದ ಜನ ಕಾಂಗ್ರೆಸ್​, ಜೆಡಿಎಸ್​​ನಿಂದ‌ ಮಂಗಗಳಾಗಬೇಡಿ. ಯುಗಾದಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಬೇಕಿತ್ತು. ಆದರೆ ಆಗಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ, ಅವರ ಪತ್ನಿಗೆ ಮಗನ ಭವಿಷ್ಯದ ಚಿಂತೆಯಾಗಿದೆ. ಹೆಚ್​​.ಡಿ.ರೇವಣ್ಣಗೆ ಭವಾನಿ ರೇವಣ್ಣರ ಚಿಂತೆ, ಕುಮಾರಣ್ಣನಿಗೆ ನಿಖಿಲ್​​ ಚಿಂತೆ. ಕುಟುಂಬದ ಬಗ್ಗೆ ಚಿಂತೆ ಮಾಡುವವರಿಂದ ರಾಜ್ಯಕ್ಕೆ ಹಿತ ಸಿಗುವುದಿಲ್ಲ. ಆದ್ದರಿಂದ ಜನರು ಮಂಗ ಆಗಲು ಹೋಗಬೇಡಿ. ಉಚಿತವಾಗಿ ಕೊಡುತ್ತೀವಿ ಅಂದರೆ ಬಿಜೆಪಿಯನ್ನೂ ನಂಬಬೇಡಿ ಎಂದು ಹೇಳಿದರು.

Key words: Former CM-Siddaramaiah- no Constituency- MP- Pratap simha