ಹಿತಾಸಕ್ತಿ ಸಂಘರ್ಷ ಪ್ರಕರಣ: ರಾಹುಲ್ ದ್ರಾವಿಡ್ ಗೆ ಕ್ರೀನ್’ಚಿಟ್

ಬೆಂಗಳೂರು, ನವೆಂಬರ್ 15, 2019 (www.justkannada.in): ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿರುವ ರಾಹುಲ್ ದ್ರಾವಿಡ್ ವಿರುದ್ಧ ದಾಖಲಾಗಿದ್ದ ಹಿತಾಸಕ್ತಿ ಸಂಘರ್ಷ ಪ್ರಕರಣವನ್ನ ಬಿಸಿಸಿಐ ನೈತಿಕ ಅಧಿಕಾರಿ ನ್ಯಾಯಮೂರ್ತಿ ಡಿ.ಕೆ. ಜೈನ್ ರದ್ದುಗೊಳಿಸಿದ್ದಾರೆ.

ಎನ್​ಸಿಎ ಅಧ್ಯಕ್ಷರಾಗಿರುವ ರಾಹುಲ್ ದ್ರಾವಿಡ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್​ ಪ್ರೈವೆಟ್ ಲಿಮಿಟೆಡ್​ನ ಉಪಾಧ್ಯಕ್ಷ ಹುದ್ದೆಯಲ್ಲೂ ಇದ್ದಾರೆ.

ಇದು ಐಸಿಸಿ ನಿಯಮದ ಉಲ್ಲಂಘನೆಯಾಗಿದೆ ಅಂತ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್​ನ ಆಜೀವ ಸದಸ್ಯ ಸಂಜೀವ್ ಗುಪ್ತಾ ಬಿಸಿಸಿಐ ಎಥಿಕ್ಸ್ ಆಫೀಸರ್​ಗೆ ದೂರು ನೀಡಿದ್ದರು.

ಈ ಕುರಿತು ರಾಹುಲ್ ದ್ರಾವಿಡ್ ನೀಡಿರುವ ಉತ್ತರ ಸಮಂಜಸವಾಗಿದ್ದು, ಇದರಲ್ಲಿ ಹಿತಾಸಕ್ತಿ ಸಂಘರ್ಷ ಕಂಡು ಬಂದಿಲ್ಲ. ಹೀಗಾಗಿ ಈ ದೂರನ್ನ ರದ್ದುಗೊಳಿಸುತ್ತಿದ್ದೇನೆ ಅಂತ ನ್ಯಾ.ಡಿ.ಕೆ. ಜೈನ್ ತಿಳಿಸಿದ್ದಾರೆ.