ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಬೆಂಗಳೂರು, ನವೆಂಬರ್ 15, 2019 (www.justkannada.in): ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿರುವ ಅಜಿಂಕ್ಯಾ ರೆಹಾನೆ ಈ ವರ್ಷ ಬೇರೆ ತಂಡದ ಪರ ಆಡಲಿದ್ದಾರೆ.

ಈ ವರ್ಷ ಐಪಿಎಲ್ ನಲ್ಲಿ ರೆಹಾನೆ ಡೆಲ್ಲಿ ಪರ ಆಡುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಪಂಜಾಬ್ ನಾಯಕ ಆರ್ ಅಶ್ವಿನ್ ಕೂಡಾ ಡೆಲ್ಲಿ ತಂಡದ ಪಾಲಾಗಿದ್ದಾರೆ.

2011 ರಿಂದ ರಾಜಸ್ಥಾನ್ ತಂಡದ ಪರ ಅಜಿಂಕ್ಯಾ ಐಪಿಎಲ್ ಆಡುತ್ತಿದ್ದಾರೆ. ಕಳೆದ ಐಪಿಎಲ್ ನಲ್ಲಿ ಟೂರ್ನಮೆಂಟ್ ಮಧ‍್ಯದಲ್ಲೇ ಕಳಪೆ ನಾಯಕತ್ವದ ಹಿನ್ನಲೆಯಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ ನೀಡಲಾಗಿತ್ತು.