ನಟಿ ಕಂಗನಾ ವಿರುದ್ಧ ನ್ಯಾಯಾಲಯದಲ್ಲಿ ದಾವೆ

Promotion

 ಮುಂಬೈ, ಜುಲೈ 30, 2020 (www.justkannada.in): ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಸಹೋದರಿ ರಂಗೋಲಿ ಚಾಂಡೇಲ ವಿರುದ್ಧ ದೂರು ದಾಖಲಾಗಿದೆ.

ಮುಂಬೈ ಮೂಲದ ವಕೀಲರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಎರಡು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ಚಾಂಡೇಲ ಖಾತೆಯನ್ನು ಟ್ವಿಟ್ಟರ್ ಇಂಡಿಯಾ ಅಮಾನತುಗೊಳಿಸಿತ್ತು. ಅರ್ಜಿಯ ಮೊದಲ ವಿಚಾರಣೆಯನ್ನು ಆಗಸ್ಟ್ 14 ರಂದು ನಿಗದಿಪಡಿಸಲಾಗಿದೆ ಎಂದು ದೂರುದಾರ ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಹೇಳಿದ್ದಾರೆ.