ಕಾರು ಅಪಘಾತ: ಶಾಸಕ ಅರವಿಂದ ಬೆಲ್ಲದ್ ಅವರ ಚಿಕ್ಕಪ್ಪ ಸಾವು.

Promotion

ಧಾರವಾಡ,ಅಕ್ಟೋಬರ್,6,2022(www.justkannada.in): ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಶಾಸಕ ಅರವಿಂದ್ ಬೆಲ್ಲದ್ ಅವರ ಚಿಕ್ಕಪ್ಪ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಧಾರವಾಡದ ಎಸ್.ಪಿ ಕಚೇರಿ ಎದುರು ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ ಶಾಸಕ ಅರವಿಂದ್ ಬೆಲ್ಲದ್ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ್(82) ಮೃತಪಟ್ಟವರು. ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿಯಾಗಿ  ಅಪಘಾತ  ಸಂಭವಿಸಿದ್ದು, ಶಿವಣ್ಣ ಬೆಲ್ಲದ್ ಅವರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

Key words: Car-accident-MLA- Arvind Bellad- uncle- dies.