ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಗೆ ಅರ್ಜಿ ಸಲ್ಲಿಸಬಹುದು: ವಲಸೆ ಹೋದವರಿಗೂ ಮುಕ್ತ ಆಹ್ವಾನ ನೀಡಿದ  ಡಿ.ಕೆ ಶಿವಕುಮಾರ್

Promotion

ಬೆಂಗಳೂರು,ನವೆಂಬರ್,2,2022(www.justkannada.in):  ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಟಿಕೆಟ್ ಗೆ ಅರ್ಜಿ ಸಲ್ಲಿಸಬಹುದು. ಕಾಂಗ್ರೆಸ್​ ಟಿಕೆಟ್​​ಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು. ವಲಸೆ ಹೋದವರಿಗೂ ಮುಕ್ತ ಆಹ್ವಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಡಿ.ಕೆ ಶಿವಕುಮಾರ್,  ಮುಂದಿನ ಚುನಾವಣೆಗೆ ಕಾಂಗ್ರೆಸ್​​ ಪಕ್ಷ ಸಜ್ಜಾಗುತ್ತಿದ್ದು, ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಎಲ್ಲಾ ತಯಾರಿ ಮಾಡಿಕೊಳುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು. ಕೆಪಿಸಿಸಿ ಕಚೇರಿಯಲ್ಲಿ 5 ಸಾವಿರ ರೂಪಾಯಿ ಕೊಟ್ಟು ಅರ್ಜಿ ಪಡೆಯಬಹುದು ಎಂದ ಹೇಳಿದರು.

 ಅರ್ಜಿ ಜೊತೆಯಲ್ಲಿ 2 ಲಕ್ಷ ರೂ. ಡಿಡಿ ಶುಲ್ಕ ನೀಡಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು 1 ಲಕ್ಷ ರೂ. ಡಿಡಿ ಮೂಲಕ ಅರ್ಜಿ ಸಲ್ಲಿಸಬೇಕು. ಯಾರು ಕಾಂಗ್ರೆಸ್​ ಟಿಕೆಟ್​ ಬಯಸುತ್ತಾರೋ ಅವರು ಅರ್ಜಿ ಹಾಕಬಹುದು. ನಾನು ಸ್ಪರ್ಧಿಸಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬೇಕು. ಕಾಂಗ್ರೆಸ್​ ಟಿಕೆಟ್ ​​ಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದರು.

Key words: Candidates- ticket – assembly elections- DK Shivakumar