ರೋಸ್ಟರ್ ಪದ್ದತಿ ರದ್ದು ಸೇರಿದಂತೆ 20 ಬೇಡಿಕೆ ಈಡೇರಿಕೆಗಾಗಿ  ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಒತ್ತಾಯ…!

ಮೈಸೂರು,ಡಿಸೆಂಬರ್,21,2020(www.justkannada.in) : ಪೌರಕಾರ್ಮಿಕರ ನೇಮಕಾತಿಯಲ್ಲಿ ರೋಸ್ಟರ್ ಪದ್ದತಿ ರದ್ದುಗೊಳಿಸಿ ಹಾಲಿ ಕಾರ್ಮಿಕರನ್ನು ಖಾಯಂ ಮಾಡಬೇಕು ಸೇರಿದಂತೆ ಸಫಾಯಿ ಕರ್ಮಚಾರಿಗಳು, ಮ್ಯಾನ್ಯುವಲ್ ಸ್ಕ್ಯಾವೆಂಜರ್ ಮತ್ತು ಪೌರಕಾರ್ಮಿಕರ ೨೦ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.Teachers,solve,problems,Government,bound,Minister,R.Ashokಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ‌ ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದು,  ೭೦೦ ಜನಸಂಖ್ಯೆಗೆ ಒಬ್ಬರಂತೆ ಪೌರಕಾರ್ಮಿಕರ ನೇಮಕಾತಿಯನ್ನು ರದ್ದುಪಡಿಸಿ ೫೦೦ ಕ್ಕೆ ಒಬ್ಬರಂತೆ ನೇಮಕ ಮಾಡಬೇಕು. ಪೌರಕಾರ್ಮಿಕರ ಹುದ್ದೆಯನ್ನು ಸರ್ಕಾರಿ ನೌಕರಿ ಎಂದು ಪರಿಗಣಿಸಬೇಕು. ‘ಜ್ಯೋತಿ ಸಂಜೀವಿನಿ ಯೋಜನೆ’ ಆರೋಗ್ಯ ಕಾರ್ಡನ್ನು ನಗದು ರಹಿತ ಮಾಡಬೇಕು ಎಂದು ಆಗ್ರಹಿಸಿದರು.

 

Cancel-roster-system-Including 20-demand-fulfillment-District-Safai-Karmachari-Reconnaissance- Awareness-Committee ...
ಕೃಪೆ : internet

ವಿದ್ಯಾರ್ಥಿ ವೇತನ ನೀಡುವಾಗ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಎಂಬ ಪದ ಬಳಕೆ ಕೈಬಿಟ್ಟು ಸಫಾಯಿ ಕರ್ಮಚಾರಿಗಳು ಎಂದು ಬದಲಾಯಿಸಬೇಕು. ಪೌರಕಾರ್ಮಿಕರಿಗೆ ೨೫ ಲಕ್ಷ ರೂ. ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೊಳಿಸಬೇಕು. ಪೌರಕಾರ್ಮಿಕರ ಮರಣಹೊಂದಿದಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ೫೦ ಸಾವಿರ ರೂ. ನೀಡಬೇಕು ಸೇರಿದಂತೆ ೨೦ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

key words : Cancel-roster-system-Including 20-demand-fulfillment-District-Safai-Karmachari-Reconnaissance- Awareness-Committee …