Friday, July 31, 2026

BDA Apartments

Home Crime ಮನೆಗೆ ನುಗ್ಗಿ ದರೋಡೆಕೋರರಿಂದ ಪತಿ, ಪತ್ನಿ ಮೇಲೆ ಹಲ್ಲೆ  : ಹಣ ಚಿನ್ನಾಭರಣ ದೋಚಿ ಪರಾರಿ….

ಮನೆಗೆ ನುಗ್ಗಿ ದರೋಡೆಕೋರರಿಂದ ಪತಿ, ಪತ್ನಿ ಮೇಲೆ ಹಲ್ಲೆ  : ಹಣ ಚಿನ್ನಾಭರಣ ದೋಚಿ ಪರಾರಿ….

ಬೆಳ್ತಂಗಡಿ,ಡಿಸೆಂಬರ್,21,2020(www.justkannada.in):  ಮನೆಯೊಂದಕ್ಕೆ ದರೋಡೆಕೊರರು ನುಗ್ಗಿ ನಗನಗದು ದರೋಡೆ ಮಾಡಿ ಪರಾರಿಯಾಗಿರುವ  ಘಟನೆ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.mangalore-gangsters-robbary-money-jewelry-theft

ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಸಮೀಪದ  ನೂಜೆ ತುಕ್ರಪ್ಪ ಶೆಟ್ಟಿಯವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆಕೋರರ ತಂಡ ಮಧ್ಯರಾತ್ರಿ ನುಗ್ಗಿ ಈ ದುಷ್ಕೃತ್ಯವೆಸಗಿದೆ.  ಮನೆಯ ಯಜಮಾನ ಮತ್ತು ಅವರ‌ ಪತ್ನಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗನಗದು ದೋಚಿದ್ದಾರೆ.

ಹಾಗೆಯೇ ದರೋಡೆಕೋರರು ನೂಜೆ ತುಕ್ರಪ್ಪ ಶೆಟ್ಟಿ ಮತ್ತು ಅವರ ಪತ್ನಿಇಬ್ಬರನ್ನು  ಸ್ಥಳದಲ್ಲೆ ಕೂಡಿ ಹಾಕಿ  ಹಲ್ಲೆ ನಡೆಸಿದ್ದಾರೆ. ಪತ್ನಿಗೆ ಚೂರಿಯಿಂದ ಹೊಟ್ಟೆಗೆ ಎರಡು ಬಾರಿ ಇರಿದಿದ್ದು, ತೀವ್ರ ಗಾಯಗಳಾಗಿವೆ. ಕೂಡಲೇ ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ರವಾನಿಸಲಾಗಿದೆ. ಮನೆಯಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಇದ್ದರು.

ಈ ವೇಳೆ ನುಗ್ಗಿದ ದುಷ್ಕರ್ಮಿಗಳ ತಂಡ ಇವರನ್ನೆಲ್ಲ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ  ಈ ದರೋಡೆ ನಡೆಸಿದ್ದು,  ಈ ಕುರಿತು ಧರ್ಮಸ್ಥಳ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.  ಕೂಡಲೆ ಪೋಲೀಸ್ ಅಧಿಕಾರಿಗಳು ಘಟನೆ ನಡೆದ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನೂಜೆ ತುಕ್ರಪ್ಪ ಶೆಟ್ಟಿ ಸ್ಥಳೀಯವಾಗಿ ವಿಶ್ವಹಿಂದೂ ಪರಿಷತ್ ನ ಕೊಕ್ಕಡ ವಲಯ ಅದ್ಯಕ್ಷರಾಗಿದ್ದರು.

Key words: mangalore- gangsters-robbary-Money- jewelry –theft