ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕ್ಯಾಮರಾ ಕಣ್ಗಾವಲು

ಬೆಂಗಳೂರು, ನವೆಂಬರ್ 22, 2020 (www.justkannada.in): ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ, ಮತ ಎಣಿಕೆಯ ಮೇಲೆ ಚುನಾವಣಾ ಆಯೋಗ ಕಣ್ಗಾವಲು ಇಟ್ಟಿದೆ.

ಮತದಾನ, ಮತ ಎಣಿಕೆ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಿಸುವಂತೆ ಜಿಲ್ಲಾಧಿಕಾರಿಳಿಗೆ ಸೂಚನೆ ನೀಡಿದೆ. ವಿಡಿಯೋ ಚಿತ್ರೀಕರಣ ಹಿನ್ನೆಲೆಯಲ್ಲಿ ವಿಡಿಯೋಗ್ರಾಫರ್ ಗಳನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನೇಮಕವಾದ ವಿಡಿಯೋಗ್ರಾಫರ್ ಗಳಿಗೆ ದೈನಂದಿನ ಭತ್ಯೆ ಇತರೆ ಖರ್ಚುಗಳಿಗೆ 1500 ರೂ ನೀಡಿರುವಂತೆ ಸೂಚನೆ ನೀಡಿರುವ ಚುನಾವಣಾ ಆಯೋಗ ಮತದಾನ, ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ವಿಡಿಯೋಗಳನ್ನು ಪರಿಶೀಲಿಸುವಂತೆ ತಹಶೀಲ್ದಾರ್ ಗಳಿಗೆ ತಿಳಿಸಿದೆ.