ಶಬರಿಮಲೆ ಪ್ರವಾಸ ಹೊರಟಿದ್ದೀರಾ…? ಈ ಸುದ್ದಿ ತಪ್ಪದೇ ಓದಿ

ಬೆಂಗಳೂರು, ನವೆಂಬರ್ 22, 2020 (www.justkannada.in): ಮಕರ ವಿಳಕ್ಕು ಶಬರಿ ಮಲೆಯಾತ್ರೆ ಕೈಗೊಳ್ಳುವ ಭಕ್ತಾಧಿಗಳು ಕಡ್ಡಾಯವಾಗಿ ವೆಬ್ ಸೈಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸರಕಾರ ನಿರ್ದೇಶನ ನೀಡಿದೆ.

ಪ್ರತಿದಿನ ಸಾವಿರ ಭಕ್ತಾಧಿಗಳಿಗೆ ಮಾತ್ರ ಅವಕಾಶವಿದೆ ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುವುದು ಬೇಟಿ ನೀಡುವ 48 ಗಂಟೆ ಅವಧಿಗೆ ಮುನ್ನ ಕೊರೋನ ಪ್ರಮಾಣ ಪತ್ರ ಕಡ್ಡಾಯವಾಗಿದೆ.