ಸಂಪುಟ ರಚನೆ ವಿಚಾರ: ವಲಸೆ ಬಂದ ಕೆಲವರಿಗೆ ಸ್ಥಾನ ಸಿಗದೆ ಇರಬಹುದು- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಆಗಸ್ಟ್,2,2021(www.justkannada.in):  ಸಚಿವ ಸಂಪುಟ ರಚನೆ ಸಂಬಂಧ ವಲಸೆ ಬಂದ ಕೆಲವರಿಗೆ ಸ್ಥಾನ ಸಿಗದೆ ಇರಬಹುದು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಇನ್ನೆರೆಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಎಲ್ಲವೂ ದೇವರು, ಹೈಕಮಾಂಡ್ ಗೆ ಬಿಟ್ಟಿದ್ದು. ಲಾಬಿ ಒತ್ತಡಕ್ಕೆ ಹೈಕಮಾಂಡ್ ಮಣಿಯಲ್ಲ. ವಲಸೆ ಬಂದ ಕೆಲವರಿಗೆ ಸ್ಥಾನ ಸಿಗದೆ ಇರಬಹುದು. ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ ಎಂದರು.

ಸಿಎಂ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಮಾತ್ರ ಎಂಬ ಸ್ವಾಮೀಜಿಯೊಬ್ಬರ ಭವಿಷ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಸ್ವಾಮೀಜಿಗಳ ಹೇಳಿಕೆ ಬಗ್ಗೆ ಏನು ಹೇಳಲಾರೆ.  ಅದು ಸುಳ್ಳು ಆಗಬಹುದು. ಸತ್ಯವೂ ಆಗಬಹುದು ಎಂದು ನುಡಿದರು.

Key words: cabinet –structure- issue-  Former Minister- KS Eshwarappa