ಮೈಸೂರು ವಿವಿ ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ದ ಕ್ರಮದ ಬಗ್ಗೆ ಕುಲಪತಿ ಸ್ಪಷ್ಟನೆ…

ಮೈಸೂರು,ಜ,17,2020(www.justkannada.in): ಪೌರತ್ವ ಕಾಯ್ದೆ  ವಿರೋಧಿಸಿ ಪ್ರತಿಭಟನೆ ವೇಳೆ ಫ್ರಿ ಕಾಶ್ಮೀರ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದ ಘಟನೆ ಹಿನ್ನೆಲೆಯಲ್ಲಿ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ದ ಕ್ರಮ ಜರುಗಿಸುವ ಸಂಬಂಧ ಸಮಿತಿಯೊಂದನ್ನ ಸದ್ಯದಲ್ಲೇ ರಚಿಸಲಾಗುವುದು.

ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನ  ಹಾಸ್ಟೆಲ್ ನಿಂದ ಅಮಾನತುಗೊಳಿಸಲು  ಮೈಸೂರು ವಿವಿ ಸಿಂಡಿಕೇಟ್  ನಿರ್ಧರಿಸಿದೆ ಎಂದು ವರದಿ ಪ್ರಕಟವಾದ ಬೆನ್ನಲ್ಲೆ ಜಸ್ಟ್ ಕನ್ನಡ ಡಾಟ್ ಇನ್ ಗೆ ಸ್ಪಷ್ಟನೆ ನೀಡಿರುವ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಹೇಳಿದ್ದಿಷ್ಟು….

ಮೈಸೂರು  ವಿವಿಯಲ್ಲಿ ಆಯೋಜಿಸಿದ್ದ  ಪ್ರತಿಭಟನೆ ಈಗ ವಿವಾದಕ್ಕೆ ಎಡೆ ಮಾಡಿರುವ ಹಿನ್ನೆಲೆಯಲ್ಲಿ ಕೆಲ ಸದಸ್ಯರು ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ವಿದ್ಯಾರ್ಥಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಸಮಿತಿಯೊಂದನ್ನ ರಚಿಸಿ ಅದು ನೀಡುವ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು. ಈ ತಕ್ಷಣಕ್ಕೆ ವಿದ್ಯಾರ್ಥಿಗಳ ವಿರುದ್ದ ಯಾವುದೇ ಕ್ರಮಕ್ಕೆ ಮೈಸೂರು ವಿವಿ ಮುಂದಾಗಿಲ್ಲ ಎಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.

Key words:CAA-Against-protest- mysore university -Syndicate meeting-Vice Chancellor-hemanth kumar