ಕೃಷ್ಣಮಾಚಾರಿ ಶ್ರೀಕಾಂತ್‌, ಅಂಜುಮ್‌ ಚೋಪ್ರಾಗೆ ಸಿ.ಕೆ. ನಾಯ್ಡು ಪ್ರಶಸ್ತಿ

Promotion

ಹೊಸದಿಲ್ಲಿ, ಡಿಸೆಂಬರ್ 28, 2019 (www.justkannada.in): ಕೃಷ್ಣಮಾಚಾರಿ ಶ್ರೀಕಾಂತ್‌ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್‌ ಚೋಪ್ರಾ 2019ನೇ ಸಾಲಿನ ಪ್ರತಿಷ್ಠಿತ ಸಿ.ಕೆ. ನಾಯ್ಡು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.

ಜ. 14ರಂದು ಮುಂಬಯಿಯಲ್ಲಿ ನಡೆಯಲಿರುವ ಬಿಸಿಸಿಐ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. 60ರ ಹರೆಯದ ಶ್ರೀಕಾಂತ್‌ ತಮಿಳುನಾಡು ಕ್ರಿಕೆಟಿನ ಬಹು ದೊಡ್ಡ ಹೆಸರಾಗಿದ್ದು, 1981-1992ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು

ಇನ್ನು 42ರ ಹರೆಯದ ಅಂಜುಮ್‌ ಚೋಪ್ರಾ 12 ಟೆಸ್ಟ್‌ ಮತ್ತು 127 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.