ಉಪ ಚುನಾವಣೆ, ಯಡಿಯೂರಪ್ಪಗೆ ಸಂಕಷ್ಟ ತಪ್ಪಿದ್ದಲ್ಲ: ರಾಜಗುರು ದ್ವಾರಕನಾಥ್ ಭವಿಷ್ಯ

Promotion

ಬೆಂಗಳೂರು, ನವೆಂಬರ್ 17, 2019 (www.justkannada.in): 15 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಗೆದ್ರೇ ಮಾತ್ರ ಮುಂದಿನ ಮೂರು ವರ್ಷ ಸೇಫ್. ಇಲ್ಲವಾದಲ್ಲಿ ಯಡಿಯೂರಪ್ಪ ಅವರಿಗೆ ಕಷ್ಟಕರವಾಗಲಿದೆ ಎಂದು ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.

2020ರ ಮಾರ್ಚ್ ವರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಲಿದೆ. ಅಲ್ಲದೇ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದವರಿಗೂ ತೊಂದರೆ ತಪ್ಪಿದ್ದಲ್ಲ ಎಂದು ಭವಿಷ್ಯವನ್ನು ನುಡಿದಿದ್ದು, ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಉಪ ಚುನಾವಣೆಗೆ ರಾಜ್ಯದಲ್ಲಿ ಕಾವೇರಿದ್ದರೇ, ಇಂತಹ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ರಾಜಗುರು ದ್ವಾರಕನಾಥ್ ಸ್ಪೋಟಕ ಭವಿಷ್ಯವೊಂದನ್ನು ನುಡಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.