ಸಹೋದರನ ಜತೆಗೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸತೀಶ್​ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ, ನವೆಂಬರ್ 17, 2019 (www.justkannada.in): ಶಾಸಕ ಸತೀಶ್​ ಜಾರಕಿಹೊಳಿ ಸಹೋದರನ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಕಾಲಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿ ಪದವಿ ಪಡೆದಿದ್ದ. ರಮೇಶ್​ ಜಾರಕಿಹೊಳಿ ಕಾಲಿಗೆ ಬಿದ್ದದ್ದು ಅಲ್ಲದೆ, ಲಕ್ಷ್ಮೀ ಹೆಬ್ಬಾಳ್ಕರ್​ ಮುಂದೆ ಗಳಗಳನೆ ಅತ್ತಿದ್ದಾನೆ. ಹೀಗಾಗಿ ಆತನಿಗೆ ಮಂತ್ರಿಪದವಿ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಮೇಶ್​ನನ್ನು, ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​ ಮಂತ್ರಿ ಮಾಡಿದರು ಎನ್ನುವ ಕಾರಣಕ್ಕೆ ಭಿನ್ನಾಭಿಪ್ರಾಯ ಇತ್ತೆ ಹೊರತು, ಜಗಳ ಅಲ್ಲ. ನಮ್ಮ ಮೂವರ ನಡುವೆ ಒಳ್ಳೇ ಸಂಬಂಧ ಇದೆ. ಉಪ ಚುನಾವಣಾ ಪ್ರಚಾರಕ್ಕೆ ಮಾಜಿ ಸಚಿವ ಡಿಕೆಶಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಆಗಮಿಸುತ್ತಾರೆ ಎಂದರು.