ಉಪಚುನಾವಣೆ ವೇಳೆ ವೈಯಕ್ತಿಕ ಟೀಕೆ ವಿಚಾರ: ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ.

ಹುಬ್ಬಳ್ಳಿ,ಅಕ್ಟೋಬರ್,21,2021(www.justkannada.in): ಸಿಂದಗಿ ಮತ್ತು ಹಾನಗಲ್  ಉಪಚುನಾವಣೆ ಪ್ರಚಾರದಲ್ಲಿ ತೊಡಗಿರುವ ಮೂರು ಪಕ್ಷದ ನಾಯಕರ  ಟಾಕ್ ವಾರ್ ಹಾಗೂ ಟ್ವೀಟ್  ಸಮರ ಜೋರಾಗಿದ್ದು ವೈಯಕ್ತಿಕ ಟೀಕೆ ನಡೆಸಿದ್ದಾರೆ.

ಈ ಮಧ್ಯೆ ವೈಯಕ್ತಿಕ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಉಪಚುನಾವಣೆ ವೇಳೆ ವೈಯಕ್ತಿಕವಾಗಿ ಟೀಕೆ ಸರಿಯಲ್ಲ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುವ ಮಾತುಗಳನ್ನ ಆಡಬೇಕು. ವಾದಕ್ಕೆ ಬಿದ್ದು ವಾದ ಮಾಡುವುದು ಸರಿಯಲ್ಲ. ಜನರ ಧ್ವನಿಯನ್ನ ಮಾಧ್ಯಮಗಳು ಬಿಂಬಿಸುತ್ತಿವೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ.  ದೇಶ ಅಭಿವೃದ್ಧಿಯಾಗಬೇಕಾದರೆ ಶಾಂತಿ ಮುಖ್ಯ. ಎಲ್ಲಿ ಶಾಂತಿ ಇರಲ್ಲವೋ ಅಲ್ಲಿ ಪ್ರಗತಿಯಾಗುವುದಿಲ್ಲ. ಕೆಲ ದೇಶಗಳು ಭಯೋತ್ಪಾದನೆಯಿಂದ ನಲುಗುತ್ತಿವೆ. ದೇಶದ ಭದ್ರತೆಗೆ ಪೊಲೀಸರು ಹೋರಾಡುತ್ತಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ನೀಡಬೇಕಾದ ಎಲ್ಲ ಸವಲತ್ತು ನೀಡುತ್ತೇವೆ. ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತೇವೆ  ಎಂದು ನುಡಿದರು.

Key words: by –election -Personal -criticism-CM-Basavaraja Bommai